Friday, June 27, 2025
spot_imgspot_img
spot_imgspot_img

ಕಾಪು: ಮನೆಯಲ್ಲಿ ಮಲಗಿದ್ದ ಯುವತಿ ನಾಪತ್ತೆ; ದೂರು ದಾಖಲು

- Advertisement -
- Advertisement -

ಕಾಪು: ಉದ್ಯಾವರ ಸಂಪಿಗೆನಗರದ ನಿವಾಸಿಯೋರ್ವಳು ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ನಡೆದಿದೆ.

ನೇತ್ರಾವತಿ (20) ನಾಪತ್ತೆಯಾದ ಯುವತಿ. ಈಕೆ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ನಿವಾಸಿಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಸೋಮವಾರ ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದ ನೇತ್ರಾವತಿ ಮಂಗಳವಾರ ಬೆಳಗ್ಗೆ5.30ಕ್ಕೆ ಎದ್ದು ವಾಶ್ ರೂಂಗೆ ಹೋಗಿದ್ದಾಕೆ ಅಲ್ಲಿಂದ ಮತ್ತೆ ಬಾರದೆ ನಾಪತ್ತೆಯಾಗಿದ್ದಳು.

ಯುವತಿ ನಾಪತ್ತೆಯಾಗಿರುವುದರಿಂದ ಗಾಬರಿಗೊಂಡ ಮನೆಯವರು ಸಂಬಂಧಿಕರು, ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದ್ದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಸದ್ಯ ಯುವತಿಯ ಸಹೋದರಿ ಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!