- Advertisement -
- Advertisement -







ಗ್ರಾನೈಟ್ ಉದ್ಯಮಿಯೋರ್ವರ ಮೃತದೇಹವು ಕಾರಿನ ಒಳಗಡೆ ಸುಟ್ಟ ಸ್ಥಿತಿಯಲ್ಲಿ ಬೆಳಗಾವಿ ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ದೊರೆತಿದೆ.
ಮುಲ್ಲಾ ಪ್ಲಾಟ್ ನಿವಾಸಿ ಫೈರೋಜ್ ಬಡಗಾಂವಿ (40) ಮೃತ ಗ್ರಾನೈಟ್ ಉದ್ಯಮಿ.
ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಚಾಲಕನ ಸೀಟಿನಲ್ಲಿ ಕುಳಿತಿದ್ದ ಫೈರೋಜ್ ಕೂಡ ಬೆಂದುಹೋಗಿದ್ದಾರೆ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
- Advertisement -








