Tuesday, July 21, 2026
spot_imgspot_img
spot_imgspot_img

ಕಾಸರಗೋಡು ಮಾಡೆಲ್ ನಿಗೂಡ ಸಾವು ಪ್ರಕರಣ; ಪತಿಯೇ ಪ್ರಮುಖ ಆರೋಪಿ

- Advertisement -
- Advertisement -

ಚೆರ್ವತ್ತೂರು: ಕಾಸರಗೋಡು ಚೆರ್ವತ್ತೂರಿನ ವಲಿಯವಳಪ್ಪು ನಿವಾಸಿ ಕಿರುತೆರೆ ನಟಿ, ಮಾಡೆಲ್ ಆಗಿದ್ದ ಶಹನಾ ಎಂಬಾಕೆ ಕಲ್ಲಿಕೋಟೆಯ ಬಾಡಿಗೆ ಮನೆಯೊಳಗೆ ನಿಗೂಢವಾಗಿ ಸಾವಿಗೀಡಾದ ಪ್ರಕರಣದಲ್ಲಿ ಪತಿ ಅಯ್ಯಪ್ಪನ್ ಕಂಡಿ ಸಜ್ಜಾದ್ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ಅಧಿಕಾರಿ ಕೆ.ಸುದರ್ಶನ್ ಅವರ ಪ್ರಾರ್ಥಮಿಕ ತನಿಖೆಯಿಂದ ದೃಢಪಟ್ಟಿದೆ.

ಆರೋಪಿ ಸಜ್ಜಾದ್ ಪತ್ನಿ ಶಹನಾ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ ಕಾರಣ ಶಹಾನಾ ನೇಣಿಗೆ ಶರಣಾಗಿರುದಾಗಿ ತಿಳಿದು ಬಂದಿದ್ದು ಜೊತೆಗೆ ಆರೋಪಿಯ ಮನೆಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದೆ. ಸಾವಿನ ಹಿಂದಿನ ದಿನ ಮನೆಯೊಳಗೆ ಸತಿ-ಪತಿಗಳ ಜಗಳ ಕೇಳಿರುವುದಾಗಿ ನೆರೆ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ನಟಿಯ ದೇಹದಲ್ಲಿ ಹಲ್ಲೆಯ ಗಾಯವಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸರು ಈ ಪ್ರಕರಣವನ್ನು ಹೆಚ್ಚಿನ ರೀತಿಯಲ್ಲಿ ತನಿಖೆ ನಡೆಸುವುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!