Friday, October 30, 2026
spot_imgspot_img
spot_imgspot_img

ಮಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಅಪಹರಣ: 1.15 ಕೋಟಿ ರೂ. ನಗದು ದರೋಡೆ

- Advertisement -
- Advertisement -

ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರ ಬಳಿ ಇದ್ದ 1.15 ಕೋಟಿ ರೂ. ನಗದಿನ 2 ಬ್ಯಾಗ್ ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸತ್ಯ ನಾರಾಯಣ ಎಂಬವರು ಅಪಹರಣಕ್ಕೆ ಒಳಗಾದರು. ಅವರು ಉರ್ವ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದಂತೆ, ಅ.23ರಂದು ಅವರ ಮಾಲಕರಾದ ಶಿವಮೊಗ್ಗದ ಗಾಂಧೀ ಬಜಾ‌ರ್ ನಿವಾಸಿ ನಾಗರಾಜ್ ಅವರು 1.15 ಕೋಟಿ ರೂ. ಹಣವಿರುದ 2 ಬ್ಯಾಗ್ ಗಳನ್ನು ನೀಡಿ, ಮಂಗಳೂರಿಗೆ ಹೋಗಿ ಅಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ ನಿಲ್ದಾಣದ ಬಳಿಯಿರುವ ಲಾಡ್ಜ್ ನಲ್ಲಿ ತಂಗುವಂತೆ ಹಾಗೂ ಅಲ್ಲಿಗೆ ತಾನು ಬರುತ್ತೇನೆಂದು ತಿಳಿಸಿದ್ದರು.

ಅದರಂತೆ ಸತ್ಯನಾರಾಯಣ ಅ.27ರಂದು ರಾತ್ರಿ 10 ಗಂಟೆಗೆ ದಾವಣಗೆರೆಯಿಂದ ಕೆ.ಎಸ್.ಆ‌ರ್.ಟಿ.ಸಿ. ಬಸ್ಸಿನಲ್ಲಿ ಹೊರಟು ಅ.28 ಬೆಳಗ್ಗೆ 6 ಗಂಟೆ ಸುಮಾರಿಗೆ ಮಂಗಳೂರು ತಲುಪಿದ್ದಾರೆ. ಲಾಲ್ ಬಾಗ್ ಬಳಿ ಬಸ್ಸಿನಿಂದ ಇಳಿದು ಪುಟ್ ಪಾತ್ ನಲ್ಲಿ ತಿಂಡಿ ತಿನ್ನಲು ನಡೆದುಕೊಂಡು ಹೋಗುತ್ತಿರುವಾಗ ಮುಖಕ್ಕೆ ಮಪ್ಲ‌ರ್ ಧರಿಸಿದ ಅಪರಿಚಿತ ನಾಲ್ಕು ಜನ ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಅವರನ್ನು ಬಲವಂತವಾಗಿ ಕಾರಿನಲ್ಲಿ ಹಾಕಿ ಅಪಹರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಂಗಳೂರು ನಗರದಲ್ಲಿ ಸುಮಾರು 2 ಗಂಟೆಗಳ ಕಾಲ ಸುತ್ತಾಡಿಸಿ, ಅವರಲ್ಲಿದ್ದ 1.15 ಕೋಟಿ ರೂ. ಹಣವಿದ್ದ 2 ಬ್ಯಾಗ್ ಮತ್ತು ಮೊಬೈಲ್ ಫೋನ್ ದರೋಡೆ ಮಾಡಿ, ಬೆಳಗ್ಗೆ 8 ಗಂಟೆಗೆ ಅವರನ್ನು ಕಾವೂರು ಬಸ್ಸು ನಿಲ್ದಾಣದ ಸಮೀಪದ ಒಂದು ಗುಡ್ಡದ ಮೇಲೆ ಕಾರಿನಿಂದ ಇಳಿಸಿ, “ಪೊಲೀಸ್‌ ದೂರು ನೀಡಿದಲ್ಲಿ ಜೀವ ಸಹಿತ ಬಿಡುವುದಿಲ್ಲ ಕೊಂದು ಹಾಕುವುದಾಗಿ” ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉರ್ವ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!