- Advertisement -
- Advertisement -



ವಿಶ್ವವನ್ನೇ ತನ್ನತ್ತ ಸೆಳೆದ ಕರವಾಳಿ ಸೊಬಗಿನ ಸಿನೆಮಾ ಕಾಂತಾರ ಕಿರುತೆರೆಯಲ್ಲಿ ಇಂದು ಅಬ್ಬರಿಸಲಿದೆ. ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಸಿನೆಮಾ ಇಂದು ಸಂಜೆ ಕಿರುತೆರೆಯಲ್ಲಿ ಕಾಣಬಹುದಾಗಿದೆ.
‘ಕಾಂತಾರ’ ಚಲನಚಿತ್ರ ಇಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಈ ಚಿತ್ರವನ್ನು ಪ್ರೇಕ್ಷಕರು ಈಗ ಕಿರುತೆರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಈ ಚಿತ್ರ ಈಗಾಗಲೇ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದ್ದು, ಆದರೆ ಓಟಿಟಿ ಚಂದಾದಾರಿಕೆ ಹೊಂದಿದವರು ಮಾತ್ರ ಇದನ್ನು ವೀಕ್ಷಿಸಬಹುದಾಗಿತ್ತು. ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವುದರಿಂದ ಎಲ್ಲರಿಗೂ ಇದು ಲಭ್ಯವಾಗಲಿದೆ.
- Advertisement -