Saturday, June 27, 2026
spot_imgspot_img
spot_imgspot_img

ಕುಂದಾಪುರ: ಗೋ ಕಳ್ಳತನ ಆರೋಪ; ಪೊಲೀಸರಿಂದ ದಾಳಿ, ಬರೋಬ್ಬರಿ 30 ಜಾನುವಾರುಗಳ ರಕ್ಷಣೆ

- Advertisement -
- Advertisement -

ಕುಂದಾಪುರ: ಗೋವುಗಳ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿ ಸುಮಾರು 30 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಗುಲ್ವಾಡಿ ಎಂಬಲ್ಲಿ ಜೂನ್ 27ರ ರವಿವಾರ ನಡೆದಿದೆ.

ಗುಲ್ವಾಡಿಯ ಅಬೂಬಕ್ಕರ್ ಎಂಬವರ ಮನೆಗೆ ಪೊಲೀಸ್ ದಾಳಿ ನಡೆಸಿದ್ದು, ಜಾನುವಾರುಗಳನ್ನು ರಕ್ಷಿಸಿದ್ದಾರೆ. ಅಬೂಬಕ್ಕರ್ ಮನೆಯಲ್ಲಿದ್ದ 30 ದನಗಳು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಸಂಘಟನೆ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನು ಪೊಲೀಸ್ ದಾಳಿಯಾಗುತ್ತಿದ್ದಂತೆ ಮನೆಯಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕಂಡ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!