Sunday, August 14, 2022
spot_imgspot_img
spot_imgspot_img

ಕುಕ್ಕಾಜೆ: ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ “ಕುಕ್ಕಾಜೆದ ಪಿಂಗಾರದ ಪುರ್ಪ” ತುಳು ಭಕ್ತಿಗೀತೆ ಬಿಡುಗಡೆ

- Advertisement -G L Acharya G L Acharya
vtv vitla
vtv vitla
- Advertisement -

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ,ಮುರುವ,ಮಾಣಿಲ ಶ್ರೀ ಕ್ಷೇತ್ರದ ಜಾತ್ರೋತ್ಸವ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಕುಕ್ಕಾಜೆದ ಪಿಂಗಾರದ ಪುರ್ಪ ಎಂಬ ಭಕ್ತಿಗೀತೆ ಶ್ರೀ ಕ್ಷೇತ್ರದ ಶ್ರೀ ಶ್ರೀಕೃಷ್ಣ ಗುರೂಜಿಯವರ ಉಪಸ್ಥಿಯಲ್ಲಿ ಪುರೋಹಿತ ಶ್ರೀ ಕೇಶವ ಶಾಂತಿ ನಾಟಿ ನರಿಕೊಂಬು ಬಿಡುಗಡೆಗೊಳಿಸಿದರು.

ಅವರು ಮಾತನಾಡಿ,ಈ ಭಕ್ತಿ ಗೀತೆ ಬಿಡುಗಡೆಯಾಗುವ ಮೂಲಕ ಶ್ರೀ ಕ್ಷೇತ್ರದ ಹೆಸರು ಎಲ್ಲೆಡೆ ಪಸರಿಸಲಿ ಹಾಗೆಯೇ ಕ್ಷೇತ್ರ ಅಭಿವೃದ್ಧಿಗೆ ಸಹಕಾರಿಯಾಗಲಿ. ಅದೇ ರೀತಿ ಈ ಒಂದು ಭಕ್ತಿ ಗೀತೆ ಬಿಡುಗಡೆಯಾಗುವಲ್ಲಿ ಇದಕ್ಕೆ ಶ್ರಮಿಸಿದ,ಗಾಯಕಿ ಅವನಿ ಎಂ.ಎಸ್.ಸುಳ್ಯ,ಸಾಹಿತ್ಯ ಬರೆದ ರವಿ ಎಸ್.ಎಂ ಕುಕ್ಕಾಜೆ, ನಿರ್ದೇಶನ ಮಾಡಿದ ದಯಾನಂದ್ ಅಮೀನ್ ಬಾಯಾರು,ಸಹಕರಿಸಿದ ಎಲ್ಲರಿಗೂ ಶ್ರೀ ದೇವರು ಅನುಗ್ರಹಿಸಲಿ ಎಂದು ಆಶೀರ್ವಾದಿಸಿದರು.

ಉತ್ತಮ ಹಾಡಿನೊಂದಿಗೆ ಉತ್ತಮ ನಟನೆ ಮಾಡಿದ ಕು.ಅವನಿ ಸುಳ್ಯ,ಸಾಹಿತ್ಯ ಬರೆದ ರವಿ ಎಸ್.ಎಂ. ಕುಕ್ಕಾಜೆ ಹಾಗೂ ಸಹಕರಿಸಿದ ಎಲ್ಲರಿಗೂ ಕ್ಷೇತ್ರದ ಪರವಾಗಿ ಅಭಿನಂದನೆಗಳು.ಇನ್ನು ಮುಂದೆಯೂ ಕಲಾಮಾತೆ ಯ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಕ್ಷೇತ್ರದ ಧರ್ಮದರ್ಶಿಗಳು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಭಜನ ಮಂದಿರದ ಪದಾಧಿಕಾರಿ ಬಾಳಪ್ಪ ತಾರಿದಳ,ಶ್ರೀ ಕೃಷ್ಣ ಪೂಜಾರಿ ತಾರಿದಳ,ಕ್ಷೇತ್ರದ ಆಡಳಿತ ಸಮಿತಿ ಸದಸ್ಯರು,ಹಾಗೂ ರವಿ ಎಸ್ ಎಂ.ದಯಾನಂದ ಅಮೀನ್ ಬಾಯಾರು ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!