- Advertisement -



- Advertisement -
ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದಲ್ಲಿ ಕ್ಷೇತ್ರದ ಆಡಳಿತ ಮೊಕ್ತೆeಸರರು, ಕ್ಷೇತ್ರದ ಪುನರ್ ನಿರ್ಮಾಣದ ರೂವಾರಿ, ಕೊಡುಗೈ ದಾನಿ ಕೃಷ್ಣ ಎನ್ ಉಚ್ಚಿಲ್ ರವರು ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ 10ನೇ ಬಾರಿಗೆ ಕೊಡುತ್ತಿದ್ದ ಸಾರ್ವಜನಿಕ ಉಚಿತ ಅಕ್ಕಿ ವಿತರಣಾ ಕಾರ್ಯಕ್ರಮ ದಿನಾಂಕ 17.09.2023ರಂದು ನಡೆಯಿತು.

ಬಾಲಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಜಾತಿ ಮತದ ಗೋಡೆ ಇಲ್ಲದೆ ಆಗಮಿಸಿದ ಎಲ್ಲರಿಗೂ ಅಕ್ಕಿ ವಿತರಣೆ ಕಾರ್ಯಕ್ರಮ ನಡೆಯಿತು. ಈ ಬಾರಿ ಇಷ್ಟು ವರ್ಷಕ್ಕಿಂತ ಹೆಚ್ಚು ಸುಮಾರು 3,000ಕ್ಕಿಂತಲೂ ಹೆಚ್ಚು ಮನೆಗೆ ಶ್ರೀ ಭಗವತೀ ಮಾತೆಯ ಪ್ರಸಾದ ರೂಪದಲ್ಲಿ ಅಕ್ಕಿ ವಿತರಣೆ ಮಾಡಲಾಯಿತು.
ಕ್ಷೇತ್ರಾಡಳಿತ ಎಲ್ಲಾ ಸಮಿತಿಗಳ ಮುಖಂಡರು, ಸರ್ವ ಸದಸ್ಯರು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು.
- Advertisement -