Saturday, August 29, 2026
spot_imgspot_img
spot_imgspot_img

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವ ಕೃಷಿಕ ಸಾವು

- Advertisement -
- Advertisement -

ಹೆಬ್ರಿ: ತೋಟದಲ್ಲಿ ಕೃಷಿ ಕೆಲಸ ಮಾಡ್ತಿದ್ದಾಗ ಕುಸಿದು ಬಿದ್ದು ಯುವ ಕೃಷಿಕ ಸಾವನ್ನಪ್ಪಿರುವ ಗಟನೆಹೆಬ್ರಿಯ ಬೇಳಂಜೆ ಗ್ರಾಮದ ಈಶ್ವರ ನಗರ ಎಂಬಲ್ಲಿ ನಡೆದಿದೆ.

ಕೃಷ್ಣ ನಾಯ್ಕ (26) ಎಂಬುವವರು ಮೃತಪಟ್ಟವರು. ಇವರು ಮನೆ ಸಮೀಪದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಪರೀತ ಎದೆನೋವು ಕಾಣಿಸಿಕೊಂಡು ಅಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ.

ತೀವ್ರವಾಗಿ ಅಸ್ವಸ್ಥಗೊಂಡ ಅವರು ಜು.13ರಂದು ಮುಂಜಾನೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!