



ವಿಟ್ಲ:ವಿಶ್ವ ಹಿಂದು ಪರಿಷದ್ ಮಾತೃ ಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಆಶ್ರಯದಲ್ಲಿ 32 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ವೇದ ಮೂರ್ತಿ ಉದಯೇಶ ಕೆದಿಲಾಯರ ಪೌರೊಹಿತ್ಯದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ವೀಣಾಸರಸ್ವತಿ ಧಾರ್ಮಿಕ ಉಪನ್ಯಾಸ ನೀಡಿ ” ಪರಿಶುದ್ಧವಾದ ನಮ್ಮ ಶರೀರವನ್ನು ನಾವು ಕಲ್ಮಶ ಮಾಡಿಕೊಳ್ಳ ಬಾರದು. ಸಪ್ತ ಸಾಗರವೂ, ಪಂಚ ಭೂತಗಳೂ ನಮ್ಮ ಶರೀರದಲ್ಲಿ ಸೇರಿಕೊಂಡಿವೆ. ಆದ್ದರಿಂದ ನಮ್ಮ ಶರೀರವನ್ನು ನಾವು ಶುದ್ಧವಾಗಿ ಇಟ್ಟುಕೊಳ್ಳಬೇಕು” ಎಂದರು.


ಮಾತೃ ಮಂಡಳಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ರಾಜೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಭವ್ಯ ರಾಜೇಶ್ ಸ್ವಾಗತಿಸಿದರು. ಅದ್ವಿಕಾ, ಶ್ರಾವಣಿ, ಆರಾಧ್ಯ ವಂದೇ ಮಾತರಂ ಹಾಡಿದರು. ಕಾರ್ಯಾಲಯ ಕಾರ್ಯದರ್ಶಿ ಸವಿತಾ ಜತ್ತಪ್ಪ ಗೌಡ ವಂದಿಸಿದರು. ಕಾರ್ಯದರ್ಶಿ ರಶ್ಮಿ ಹರೀಶ್ ನಿರೂಪಿಸಿದರು. ಚೈತ್ರಾ ಗೋವರ್ಧನ್, ರೇವತಿ ರವೀಂದ್ರ, ಸೋನಿಯಾ, ನಿಶ್ಮಿತಾ, ಸರಸ್ವತಿ ಸಹಕರಿಸಿದರು








