Friday, July 11, 2025
spot_imgspot_img
spot_imgspot_img

ಕೊಡಗು ಜಿಲ್ಲೆ 5 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್!

- Advertisement -
- Advertisement -

ಕೊಡಗು: ದಕ್ಷಿಣ ಕಾಶ್ಮೀರ ಎಂದೆ ಕರೆಸಿಕೊಳ್ಳುವ ಮಂಜಿನ ನಗರಿಯಲ್ಲಿ ಕೊರೋನಾ ಸವಾರಿ ಹೆಚ್ಚಾಗಿ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಳವಾದ ಹಿನ್ನೆಲೆಯಲ್ಲಿ ವಾರದಲ್ಲಿ 5 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹೆಮ್ಮಾರಿಯನ್ನು ಕಟ್ಟಿ ಹಾಕಲು ರಾಜ್ಯ ಸರಕಾರ ಕಳೆದ ವಾರವಷ್ಟೆ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಿಸೇ ವಾರದಲ್ಲಿ 5 ದಿನ ಬೆಳೆಗ್ಗೆ 6 ರಿಂದ ಬೆಳೆಗ್ಗೆ 10 ಗಂಟೆ ತನಕ ಅಗತ್ಯ ವಸ್ತುಗಳಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿತ್ತು.

ಇದೀಗ ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಜಿಲ್ಲೆಯಲ್ಲಿ ವಾರದಲ್ಲಿ 5 ದಿನ ಸಂಪೂರ್ಣ ಲಾಕ್ ಡೌನ್ ಮಾಡಿ ಜನರ ಓಡಾಟ ನಿಯಂತ್ರಿಸಲು ನಿರ್ಧಾರ ಮಾಡಲಾಗಿದೆ.

ವಾರದಲ್ಲಿ ಎರಡು ದಿನ (ಸೋಮವಾರ ಮತ್ತು ಶುಕ್ರವಾರ) ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಸೋಮವಾರಪೇಟೆ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಡಿಸಿ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ

driving
- Advertisement -

Related news

error: Content is protected !!