Saturday, June 13, 2026
spot_imgspot_img
spot_imgspot_img

ಫ್ಯಾನಿಗೆ ನೇಣು ಬಿಗಿದು ಮಹಿಳೆ ಆತ್ಮಹತ್ಯೆ..!

- Advertisement -
- Advertisement -

ಶಂಕರನಾರಾಯಣ: ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಂಕರನಾರಾಯಣ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮೃತರ ತಂದೆ ಕಾವ್ರಾಡಿ ಗ್ರಾಮದ ಉಮೇಶ್ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸಿದ್ದಾಪುರ ಗ್ರಾಮದ ಸುಪ್ರೀತ್ ಕಾಮತ್ ಎಂಬವರ ಪತ್ನಿ ಕಾವ್ಯ(27) ಎಂದು ಗುರುತಿಸಲಾಗಿದೆ.

ಕಾವಾಡಿ ಗ್ರಾಮದ ಉಮೇಶ್ ಅವರ ಪುತ್ರಿ ಕಾವ್ಯಾರನ್ನು 2023ರಲ್ಲಿ ಸಿದ್ಧಾಪುರ ಕೆಳಪೇಟೆಯ ಸುಪ್ರೀತ್‌ ಕಾಮತ್‌ಗೆ ಮದುವೆ ಮಾಡಿಕೊಡಲಾಗಿತ್ತು. ಹೆಸ್ಕತ್ತೂರು ಪ್ರೌಢ ಶಾಲೆಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತಿದ್ದ ಸುಪ್ರೀತ್‌ ದಂಪತಿಗೆ 10ತಿಂಗಳ ಹೆಣ್ಣು ಮಗುವಿದೆ. ಕಾವ್ಯಾ ಗಂಡ ಹಾಗೂ ಅತ್ತೆ ಆಶಾ ಕಾಮತ್‌ರೊಂದಿಗೆ ಸಿದ್ದಾಪುರದ ಮನೆಯಲ್ಲಿ ವಾಸವಾಗಿದ್ದರು.

ಫೆ.5ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದದಿಲ್ಲ. ಆತ್ಮಹತ್ಯೆಗೆ ಮುನ್ನ ಮನೆಯವರಿಗೆ ಸಂದೇಶ ಕಳುಹಿಸಿದ್ದರೆಂದು ಹೇಳಲಾಗಿದೆ. ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

- Advertisement -

Related news

error: Content is protected !!