Monday, June 30, 2025
spot_imgspot_img
spot_imgspot_img

ಕೊಡಗು: ಪಂದ್ಯಾಟ ಆಡುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿಯಾದ 22 ವರ್ಷದ ಹಾಕಿ ಆಟಗಾರ!!

- Advertisement -
- Advertisement -
vtv vitla
vtv vitla
vtv vitla

ಕೊಡಗು: ಹಾಕಿ ಪಂದ್ಯಾಟ ಆಡುತ್ತಿರುವಾಗಲೇ ಆಟಗಾರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗಿನ ಮೂರ್ನಾಡುವಿನಲ್ಲಿ ನಡೆದಿದೆ.

vtv vitla

ಮೃತ ಯುವಕ ಸೋಮಯ್ಯ (22) ಎನ್ನಲಾಗಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಹಾಕಿ ಪಂದ್ಯಾಟ ನಡೆಯುತ್ತಿತ್ತು. ಪಂದ್ಯಾಟ ಆಡುತ್ತಿರುವಾಗಲೇ ಸೋಮಯ್ಯಗೆ ಹೃದಯಘಾತವಾಗಿದ್ದು, ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಆಯೋಜಕರು, ಸೋಮಯ್ಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ಸೋಮಯ್ಯ ಉಸಿರು ನಿಲ್ಲಿಸಿದ್ದಾರೆ. ಆರೋಗ್ಯದಾಯಕವಾಗಿದ್ದ ಸೋಮಯ್ಯ ಪಂದ್ಯಾಟ ಆಡುವಾಗಲೇ ಕುಸಿದು ಮೃತಪಟ್ಟಿರುವುದು ಉಳಿದ ಹಾಕಿ ಆಟಗಾರರು ಮತ್ತು ನೆರೆದ ಕ್ರೀಡಾಪ್ರೇಮಿಗಳು ಶಾಕ್ ಆಗಿದ್ದಾರೆ.

- Advertisement -

Related news

error: Content is protected !!