- Advertisement -
- Advertisement -
ಕೊಣಾಜೆ: ಕಪ್ಪು ಪಲ್ಸರ್ ಬೈಕಲ್ಲಿ ಬಂದ ಕಳ್ಳರು ಮಹಿಳೆಯೋರ್ವರಿಗೆ ಖಾರದ ಪುಡಿ ಎರಚಿ ಚಿನ್ನ ಎಂದು ರೋಲ್ ಗೋಲ್ಡ್ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ಹರೇಕಳ ಗ್ರಾಮದ ಬಾವಲಿಗುರಿ ಎಂಬಲ್ಲಿ ನಡೆದಿದೆ.

ಹರೇಕಳ ಗ್ರಾಮದ ಬಾವಲಿಗುರಿ ಎಂಬಲ್ಲಿ ಬಸ್ಸು ನಿಲ್ದಾಣದಲ್ಲಿ ಕೆಲಸಕ್ಕೆ ತೆರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶಾಂತ ಎಂಬ ಮಹಿಳೆಗೆ ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಖಾರದ ಪುಡಿ ಎರಚಿ ಕತ್ತಲ್ಲಿದ್ದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.

ಮಹಿಳೆ ಧರಿಸಿದ್ದ ಕರಿಮಣಿ ಸರ ಮಾತ್ರ ರೋಲ್ಡ್ ಗೋಲ್ಡ್ ಆಗಿದ್ದು ಸುಮಾರು 600 ರೂಪಾಯಿ ಬೆಳೆಯದ್ದಾಗಿದೆ ಎಂದು ಕೊಣಾಜೆ ಪೊಲೀಸರು ತಿಳಿಸಿದ್ದಾರೆ. ಶಾಂತ ಅವರು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


- Advertisement -








