Friday, July 11, 2025
spot_imgspot_img
spot_imgspot_img

ಗಂಡನ‌ ಕಿರುಕುಳದಿಂದ ಬೇಸತ್ತು 5 ತಿಂಗಳ ಗರ್ಭಿಣಿ ಆತ್ಮಹತ್ಯೆ

- Advertisement -
- Advertisement -
vtv vitla
vtv vitla

ರಾಮನಗರ: ತನ್ನ ತವರು ಮನೆಯಲ್ಲೇ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ. ಗಂಡನ‌ ಕಿರುಕುಳವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆ ಜಾನ್ಹವಿ (23) ಎನ್ನಲಾಗಿದೆ.

ಜಾನ್ಹವಿ ಕಳೆದ 9 ತಿಂಗಳ ಹಿಂದೆ ಕರ್ಣ ಎಂಬುವನ ಜೊತೆ ವಿವಾಹವಾಗಿತ್ತು. ಕರ್ಣ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದವನಾಗಿದ್ದು, ಕಳೆದ ಹಲವು ತಿಂಗಳಿಂದ ತಮ್ಮ ಮಗಳಿಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದ ಎಂದು ಜಾನ್ಹವಿ ಪೋಷಕರು ಆರೋಪಿಸಿದ್ದಾರೆ.

ಗಂಡನ ಹಿಂಸೆ ತಾಳಲಾಗದೇ ಐದು ತಿಂಗಳ ಗರ್ಭಿಣಿ ಜಾನ್ಹವಿ ಕಳೆದ ಒಂದು ತಿಂಗಳ ಹಿಂದೆ ತವರು ಮನೆಗೆ ಬಂದು ವಾಸವಿದ್ದಳು. ತವರು ಮನೆಗೆ ಬಂದರೂ ಪತಿ ಫೋನ್ ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳ ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಐಜೂರು ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!