

ಶಾರುಖ್ ಖಾನ್ ಮತ್ತು ಮಹಿರಾ ಖಾನ್ ಅವರ ಝಾಲಿಮಾ ಹಾಡಿಗೆ ಟಾಂಜೇನಿಯಾದ ವ್ಯಕ್ತಿಯೊಬ್ಬರು ಲಿಪ್ ಸಿಂಕ್ ಮಾಡಿರುವ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. 221 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೊವನ್ನು ವೀಕ್ಷಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಸಖತ್ ವೈರಲ್ ಆಗಿದೆ.

ಇದೀಗ ವೈರಲ್ ಆದ ವಿಡಿಯೊದಲ್ಲಿ ಟಾಂಜೇಲಿಯಾದ ವ್ಯಕ್ತಿ ಕಿಲಿ ಪೌಲ್ ಝಾಲಿಮಾ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ಮಹಿರಾ ಖಾನ್ ನಟಿಸಿರುವ ಚಿತ್ರ ಹಾಡನ್ನು ಇವರು ಹೇಳುತ್ತಿದ್ದಾರೆ. ಈ ವಿಡಿಯೊ ಕಂಡು ನೆಟ್ಟಿಗರು ವಾವ್! ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಅದ್ಭುತವಾಗಿ ಲಿಪ್ ಸಿಂಕ್ ಮಾಡುತ್ತಿದ್ದಾರೆ ಎಂದು ಇನ್ನು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನನ್ನ ನೆಚ್ಚಿನ ಹಾಡಿದು, ಭಾರತೀಯರಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲವು ಅತ್ಯಂತ ದೊಡ್ಡ ಮಟ್ಟದ್ದು, ನಿಮ್ಮ ಪ್ರೀತಿ ಮತ್ತು ಬೆಂಬಲ ಯಾವಾಗಲೂ ಬೇಕು ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಪೋಸ್ಟ್ ಮಾಡಲಾಗಿದೆ. ಝಾಲಿಮಾ 2017ರಲ್ಲಿ ರಯೀಸ್ ಚಲನ ಚಿತ್ರದ ಹಾಡು.










