Friday, August 28, 2026
spot_imgspot_img
spot_imgspot_img

ನದಿಗೆ ಬಿದ್ದ ಬಾಲಕಿ; ರಕ್ಷಿಸಲು ಧಾವಿಸಿದ ಅತ್ತೆಯೂ ನೀರುಪಾಲು!

- Advertisement -
- Advertisement -

ವಿಜಯಪುರ: ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದ ಬಾಲಕಿಯೊಬ್ಬಳು ಕಾಲುಜಾರಿ ಗುಂಡಿಯಲ್ಲಿ ಬಿದ್ದು ಮುಳುಗಿದ್ದು, ಆಕೆಯನ್ನು ರಕ್ಷಣೆಗೆ ತೆರಳಿದ ಅವಳ ಅತ್ತೆಯೂ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹುನಕುಂಟಿ ಗ್ರಾಮದ ಶಾಂತಮ್ಮ [20 ವರ್ಷ] ಹಾಗೂ ಗುರುಸಂಗಮ್ಮ [8 ವರ್ಷ] ಎಂದು ಗುರುತಿಸಲಾಗಿದೆ.

ದನ ಮೇಯಿಸಲೆಂದು ನದಿ ತೀರಕ್ಕೆ ಇಬ್ಬರು ಹೋಗಿದ್ದರು. ಬಾಯಾರಿಕೆ ಆಗಿದ್ದರಿಂದ ಗುರುಸಂಗಮ್ಮ ನೀರು ಕುಡಿಯಲೆಂದು ನದಿಗೆ ಇಳಿದಿದ್ದಾಳೆ. ನದಿ ತೀರದಲ್ಲಿ ಅಲ್ಲಲ್ಲಿ ಮಣ್ಣು ತೆಗೆದಿದ್ದರಿಂದ ಆಳವಾದ ಗುಂಡಿಗಳಿದ್ದು, ಅವುಗಳು ಭರ್ತಿಯಾಗಿರುವುದನ್ನು ತಿಳಿಯದೇ ಬಾಲಕಿ ಗುರುಸಂಗಮ್ಮ ಕಾಲು ಜಾರಿ ಗುಂಡಿಯೊಳಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅತ್ತೆ ಶಾಂತಾ ಆಕೆಯ ರಕ್ಷಣೆಗೆ ತೆರಳಿದ್ದು, ಆಕೆಯೂ ಕೂಡ ನೀರುಪಾಲಾಗಿದ್ದಾಳೆ ಎಂದು ತಿಳಿದು ಬಂದಿದೆ.

ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ತಂಡ ಸ್ಥಳಕ್ಕಾಗಮಿಸಿ ನೀರಿನ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವವನ್ನು ಕಾರ್ಯಾಚರಣೆ ಮೂಲಕ ಹೊರ ತೆಗೆಯಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!