Saturday, June 28, 2025
spot_imgspot_img
spot_imgspot_img

ಪತಿಯ ಹಿಂಸೆ ತಾಳಲಾರದೆ ತಾಯಿ, ಮಗಳು ಕೆರೆಗೆ ಬಿದ್ದು ಆತ್ಮಹತ್ಯೆ

- Advertisement -
- Advertisement -

ಪತಿಯ ಕಿರುಕುಳ ತಾಳಲಾರದೇ ಹತ್ತು ವರ್ಷದ ಮಗಳ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಕ್ಯಾತಗಾನಕೆರೆ ಗ್ರಾಮದಲ್ಲಿ ನಡೆದಿದೆ.

ಚೌಡಕ್ಕ ಮತ್ತು ಅವರ ಹತ್ತು ವರ್ಷದ ಮಗಳು ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡವರು.

ಚೌಡಕ್ಕ ಅವರ ಪತಿ ರಾಘವೇಂದ್ರ ಪ್ರತಿನಿತ್ಯ ಮದ್ಯಪಾನ ಸೇವಿಸಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಚೌಡಕ್ಕ (32) 22ನೇ ತಾರೀಕಿನಂದು ಸಂಜೆ ತನ್ನ ಮಗಳು ರಕ್ಷಿತಾ ಸೀರೆ ಕಟ್ಟಿಕೊಂಡು ಕೆರೆಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಚೌಡಕ್ಕ ಅವರ ತಂದೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಹಿನ್ನಲೆ ಪೊಲೀಸರು ಮೃತ ಮಹಿಳೆಯ ಪತಿ ರಾಘವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!