Friday, June 27, 2025
spot_imgspot_img
spot_imgspot_img

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು..!

- Advertisement -
- Advertisement -

ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಮುಜುಗರಕ್ಕೊಳಗಾದ ಘಟನೆ ನಡೆದಿದೆ. ಮಂಡ್ಯದ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಈ ಘೋಷಣೆ ಕೇಳಿಬಂದಿದೆ. ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಮೊದಲು ಭಾರತದ ಪರ ಘೋಷಣೆ ಕೂಗಿದ್ದಾರೆ.

ಘೋಷಣೆ ಕೂಗೊ ಬರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾರಿ ಎಡವಟ್ಟು ಮಾಡಿದ್ದಾರೆ. ಹಿಂದೂಸ್ತಾನ್ ಜಿಂದಾಬಾದ್ ಅನ್ನುವ ಬದಲಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಇದೀಗ ಮುಜುಗರಕ್ಕೊಳಗಾಗಿದೆ. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧದ ಪ್ರತಿಭಟನೆ ನಡೆಸುವಾಗ ಜಿಂದಾಬಾದ್ ಜಿಂದಾಬಾದ್ ಎಂದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಬಿಜೆಪಿಯ ಇಬ್ಬರು ಕಾರ್ಯಕರ್ತರು ಕೂಗಿದ್ದು, ಕೂಡಲೇ ಅವರ ನೆರೆದಿದ್ದವರು ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

- Advertisement -

Related news

error: Content is protected !!