Saturday, August 29, 2026
spot_imgspot_img
spot_imgspot_img

ಪಾಗಲ್ ಪ್ರೇಮಿಯಿಂದ ಯುವತಿ ಮೇಲೆ ಆ್ಯಸಿಡ್ ದಾಳಿ

- Advertisement -
- Advertisement -

ಬೆಂಗಳೂರು: ಯುವತಿಯೊಬ್ಬಳ ಮೇಲೆ ಪಾಗಲ್ ಪ್ರೇಮಿಯೊಬ್ಬ ‌ ಆ್ಯಸಿಡ್ ದಾಳಿ ನಡೆಸಿದ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡಿರುವ ಯುವತಿ‌ಯನ್ನು ವಿಕ್ಟೋರಿಯಾ ಆಸ್ಪತ್ರೆಗೆ‌ ದಾಖಲಿಸಲಾಗಿದೆ.

23 ವರ್ಷದ ಯುವತಿ ಮೇಲೆ ಪಾಗಲ್ ಪ್ರೇಮಿ ನಾಗೇಶ್ ಆ್ಯಸಿಡ್ ದಾಳಿ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಈ ಘಟನೆ ನಡೆದಿದೆ. ಪ್ರೀತಿ‌ ವಿಚಾರವಾಗಿ‌ ಯುವಕನೊಬ್ಬ ಯುವತಿ‌ ಹಿಂದೆ‌ ಬಿದ್ದಿದ್ದ. ಇದೇ‌ ವಿಚಾರವಾಗಿ‌ ಪರಸ್ಪರ‌ ಗಲಾಟೆಯೂ ಆಗಿತ್ತು. ಅದೇ ಕೋಪದಲ್ಲೇ ಯುವಕ ಯುವತಿ‌ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲಸಕ್ಕೆಂದು ಯುವತಿಯನ್ನು ಆಕೆಯ ತಂದೆ ಬೈಕ್‍ನಲ್ಲಿ ಕರೆದುಕೊಂಡು ಬಂದು ಮುತ್ತೂಟ್ ಫಿನ್ ಕಾರ್ಪ್ ಬಳಿ ಡ್ರಾಪ್ ಮಾಡಿ ಹೋಗಿದ್ರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ಆರೋಪಿ ನಾಗೇಶ್ ಸೇಡು ತೀರಿಸಿಕೊಂಡಿದ್ದಾನೆ.

vtv vitla
- Advertisement -

Related news

error: Content is protected !!