Friday, September 18, 2026
spot_imgspot_img
spot_imgspot_img

ಪಾತಕಿ ಬಚ್ಚಾಖಾನ್‌ಗೆ ರಾಜಾಥಿತ್ಯ..? ಖಾಸಗಿ ಹೊಟೇಲ್‌ನಲ್ಲಿ ಸರಸ ಸಲ್ಲಾಪ – ಪೊಲೀಸರೇ ಕಾವಲು..?

- Advertisement -
- Advertisement -

ಕೊಲೆ ಆರೋಪದಡಿ ಬಂಧಿತನಾಗಿರುವ ಪಾತಕಿಯನ್ನು ಖಾಸಗಿ ಹೊಟೇಲ್‌ಗೆ ಪೊಲೀಸರೇ ಕರೆದುಕೊಂಡು ಹೋಗಿ ಪ್ರೇಯಸಿ ಜತೆ ಕಾಲ ಕಳೆಯಲು ಅವಕಾಶ ಮಾಡಿಕೊಟ್ಟ ಪ್ರಸಂಗ ನಡೆದಿದೆ. ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಬಳ್ಳಾರಿ ಜೈಲಿನಿಂದ ಪಾತಕಿ ಬಚ್ಚಾಖಾನ್‌ನನ್ನು ಕರೆತರಲಾಗಿತ್ತು.

ನಿಗದಿಯಂತೆ ಆತನನ್ನು ಖಾಸಗಿ ಹೊಟೇಲ್‌ಗೆ ಪೊಲೀಸರೇ ಕರೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿನ ಕೊಠಡಿಯೊಂದರಲ್ಲಿ ಆತನ ಪ್ರೇಯಸಿ ಕಾಯುತ್ತಿದ್ದಳು. ಬಚ್ಚಾಖಾನ್‌ ಆಕೆಯೊಂದಿಗೆ ಏಕಾಂತದಲ್ಲಿದ್ದಾಗ, ಆತನನ್ನು ಕರೆತಂದ ಪೊಲೀಸರು ಕೊಠಡಿ ಹೊರಗೆ ಕಾವಲು ಕಾದಿದ್ದರು ಎನ್ನಲಾಗಿದೆ.

ವಿಷಯ ತಿಳಿದ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಲಾಬುರಾಮ್‌ ಅವರು ತಮ್ಮ ತಂಡದೊಂದಿಗೆ ಹೋಟೆಲ್‌ ಮೇಲೆ ದಾಳಿ ಮಾಡಿ ಬಚ್ಚಾಖಾನ್‌ನನ್ನು ಬಂಧಿಸಿ ವಿದ್ಯಾಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Related news

error: Content is protected !!