Saturday, August 29, 2026
spot_imgspot_img
spot_imgspot_img

ಪಿಎಸ್‌ಐ ಅಕ್ರಮ ಪರೀಕ್ಷಾ ಪ್ರಮುಖ ಕಿಂಗ್ ಪಿನ್ ಮಂಜುನಾಥ್ ಇಂದು CID ಎದುರು ಹಾಜರ್

- Advertisement -
- Advertisement -

ಕಲಬುರಗಿ: ಪಿಎಸ್ಐ ಅಕ್ರಮ ಪರೀಕ್ಷಾ ವಿಚಾರದಲ್ಲಿ ಪ್ರಮುಖ ಕಿಂಗ್ ಪಿನ್ ಆರೋಪವನ್ನು ಹೊತ್ತಿದ್ದ ನೀರಾವರಿ ಇಲಾಖೆಯ ಎಇ ಮಂಜುನಾಥ್ ಮೇಳಕುಂದಿ ಇಂದು ಪೊಲೀಸ್ ಎದುರು ಹಾಜರಾಗಿದ್ದಾರೆ.

ಆಟೋದಲ್ಲಿಯೇ ಸಿಐಡಿ ಕಚೇರಿಗೆ ಬಂದ ಇವರು ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ ‘ಇದರಲ್ಲಿ ನನ್ನದು ಏನೂ ಪಾತ್ರವಿಲ್ಲ . ಆದರೆ ನನಗೆ ಗೊತ್ತಿರುವ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ತಿಳಿಸಲು ಈಗ ಆಫೀಸಿಗೆ ಬಂದಿದ್ದೇನೆ.

ಅನಾರೋಗ್ಯದ ತೊಂದರೆಯಿಂದ ನಾನು ಮಂಗಳೂರಿಗೆ ಹೋಗಿದ್ದೆ. ಇವತ್ತು ಅಲ್ಲಿಂದ ವಾಪಸ್ಸಾಗಿ ಸ್ಪಷ್ಟನೆ ನೀಡಲು ಇಲ್ಲಿಗೆ ಬಂದಿದ್ದೇನೆ, ಇದರಲ್ಲಿ ಭಾಗಿಯಾದವರು ಯಾರೂ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾನೆ.

ಪೊಲೀಸ್ ಸಬ್ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಕೆಲ ಆರೋಪಿತ ಅಭ್ಯರ್ಥಿಗಳು ಉಪಯೋಗಿಸಿದ್ದ ಬ್ಲೂಟೂತ್ ಗಳನ್ನು ಮಂಜುನಾಥ್ ನೀಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಮಂಜುನಾಥ್ ಕಳೆದ 21 ದಿನಗಳಿಂದ ಯಾಕೆ ಶರಣಾಗಲಿಲ್ಲ ಎಂಬ ಅನುಮಾನ ಎದುರಾಗಿದೆ.

vtv vitla
- Advertisement -

Related news

error: Content is protected !!