- Advertisement -
- Advertisement -
ಪುತ್ತೂರು: ಪುತ್ತೂರಿನ ಸಂಸ್ಥೆಯೊಂದರಲ್ಲಿ ಕೆಲಸಕ್ಕೆಂದು ವಿಳಾಸ ಹುಡುಕಿಕೊಂಡು ಬಂದ ಬೆಳಗಾಂ ಮೂಲದ ಹಿಂದು ಯುವತಿಯೊಂದಿಗೆ ಅನ್ಯಧರ್ಮದ ವ್ಯಕ್ತಿಯೊಬ್ಬ ಜೊತೆಗಿರುವುದನ್ನು ಗಮನಿಸಿದ ಹಿಂದು ಸಂಘಟನೆ ಅನ್ಯಧರ್ಮದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಇಂದು ಮಂಜಲ್ಪಡ್ಪುವಿನಲ್ಲಿ ಈ ಘಟನೆ ನಡೆದಿದ್ದು, ಬೆಳಗಾಂ ಗಾನಪುರ ಮೂಲದ ಹಿಂದು ಯುವತಿ ಮಂಗಳೂರು ಫಿಶ್ ಕಂಪೆನಿಯಲ್ಲಿ ಕೆಲಸಕ್ಕಿದ್ದು, ಅಲ್ಲಿಂದ ಪುತ್ತೂರು ಮಂಜಲ್ಪಡುವಿನಲ್ಲಿರುವ ಸಂಸ್ಥೆಯಲ್ಲಿ ಕೆಲಸಕ್ಕೆಂದು ಬಂದಾಗ ವಿಳಾಸಕ್ಕಾಗಿ ಮುಕ್ವೆಯ ಅನ್ಯಧರ್ಮದ ವ್ಯಕ್ತಿ ಆಕೆಗೆ ಸಂಸ್ಥೆಯ ವಿಳಾಸ ತೋರಿಸಿದ್ದಾರೆ. ಆದರೆ ಆತ ಯುವತಿಗೆ ಉದ್ಯೋಗದ ಆಮಿಷವೊಡ್ಡಿ, ಪುತ್ತೂರಿಗೆ ಕರೆಸಿಕೊಂಡ ವಿಚಾರದಲ್ಲಿ ಹಿಂದು ಸಂಘಟನೆ ಈ ಕುರಿತು ಹೆಚ್ಚಿನ ವಿಚಾರಣೆ ಮಾಡುವಂತೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಯುವತಿಯ ಅಣ್ಣ ಸುಳ್ಯದಲ್ಲಿ ಸಾರಣೆ ಕೆಲಸ ಮಾಡಿಕೊಂಡಿದ್ದು, ಆತ ಪುತ್ತೂರು ಪೊಲೀಸ್ ಠಾಣೆಗೆ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.
- Advertisement -