Sunday, November 1, 2026
spot_imgspot_img
spot_imgspot_img

ಸ್ಟಿಂಗ್ ಕೇಸ್‌ಗೆ ಬಿಗ್ ಟ್ವಿಸ್ಟ್: ಕುಮಾರಸ್ವಾಮಿ ಮನೆಯಲ್ಲೇ ಮೊಬೈಲ್ ಎಕ್ಸ್‌ಚೇಂಜ್ – ಕಮಿಷನರ್ ಸೀಮಂತ್ ಸಿಂಗ್ ಸ್ಫೋಟಕ ಹೇಳಿಕೆ

- Advertisement -
- Advertisement -

ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಪ್ರಕರಣದ ತನಿಖೆಯ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸ್ಟಿಂಗ್​ ಆಪರೇಷನ್​ ಪ್ರಕರಣ ಸಂಬಂಧ ನಗರ ಪೊಲೀಸ್​ ಕಮಿಷನರ್​ ಸೀಮಂತ್​ ಕುಮಾರ್​​ ಸಿಂಗ್​ ಮಾತನಾಡಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿಳಾಸದಲ್ಲಿ ರಿತೇಶ್ ಪಾಂಡೆ ಇದ್ದರು. ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೋ ಅಪ್‌ಲೋಡ್ ಆಗಿದೆ. ರಿತೀಶ್ – ಪ್ರಜ್ವಲ್ ಪ್ರಸಾದ್ ಹಣ ನಡುವೆ ವರ್ಗಾವಣೆ ಆಗಿದೆ. ಅವರ ಬಂಧನದ ಬಳಿಕ ಬೇರೆ ಬೇರೆಯವರ ಪಾತ್ರದ ಬಗ್ಗೆ ಗೊತ್ತಾಗಲಿದೆ. ಪ್ರಜ್ವಲ್ ಪ್ರಸಾದ್ ಅವರ ಬಂಧನ ಬಳಿಕ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.

ಪ್ರಜ್ವಲ್ ಪ್ರಸಾದ್ ಖರೀದಿ ಮಾಡಿರೋ ಮೊಬೈಲ್​​ನಲ್ಲಿ ವೀಡಿಯೋ ಅಪ್‌ಲೋಡ್ ಆಗಿದೆ. ಅದು ರಿತೇಶ್ ಪಾಂಡೆ ಮೂಲಕ ಅಪ್‌ಲೋಡ್ ಮಾಡಲಾಗಿದೆ. ಅಪ್‌ಲೋಡ್ ಮಾಡಲು ಹೇಳಿದವರು ಯಾರು ಅಂತ ತನಿಖೆ ಮಾಡಲಾಗ್ತಾ ಇದೆ. ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಎಕ್ಸ್​ಚೇಂಜ್​ ಆಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಈಗಾಗಲೇ ಸಿಕ್ಕಿದೆ. ಮೊಬೈಲ್ ಖರೀದಿ ಮಾಡಿರೋ ಅಂಗಡಿಯ ಸಿಸಿಟಿವಿ ಕೂಡ ಸಿಕ್ಕಿದೆ. ಮುಂದೆ ಮಹಜರು ಪ್ರಕ್ರಿಯೆಗಳನ್ನು ಮಾಡಲಾಗುವುದು, ಈಗ ತನಿಖೆ ಹಂತದಲ್ಲಿ ಇದೆ ಏನು ಹೇಳಲು ಆಗಲ್ಲ ಎಂದು ಹೇಳಿದರು.

ಪ್ರಜ್ವಲ್ ಪ್ರಸಾದ್ ನಾಪತ್ತೆ ಆಗಿದ್ದಾರೆ. ಅವರಿಗಾಗಿ ಹುಡುಕಾಟ ಮಾಡಲಾಗ್ತಿದೆ. ವಿನೋದ್ ಶರ್ಮಾ ಕೂಡ ನಾಪತ್ತೆ ಆಗಿದ್ದಾರೆ. ಇಬ್ಬರಿಗಾಗಿ ಹುಡುಕಾಟ ಮಾಡಲಾಗ್ತಾ ಇದೆ. ರಿತೇಶ್ ಪಾಂಡೆ ಹೇಳಿಕೆ ಮೇಲೆ ಸತ್ಯಾಂಶ ಏನು ಅಂತ ತನಿಖೆ ಮಾಡುತ್ತೇವೆ. ಕುಮಾರಸ್ವಾಮಿ ಹೇಳಿದಂತೆ ಆಗಿದೆಯಾ ಅನ್ನೋ ಬಗ್ಗೆ ತನಿಖೆ ಮಾಡಲಾಗ್ತಾ ಇದೆ. ಯಾರ ಅಣತಿಯನ್ನು ಮಾಡಲಾಯ್ತು ಅಂತ ತನಿಖೆ ನಡೀತಾ ಇದೆ. ಈ‌ ಹಂತದಲ್ಲಿ ಇಷ್ಟು ಮಾತ್ರ ಹೇಳಲು ಸಾಧ್ಯ, ಉಳಿದಿದ್ದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಜ್ವಲ್ ಪ್ರಸಾದ್ ಎಂಬುವರು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಪಿಆರ್​ಒ ಆಗಿದ್ದರು. ಮೊಬೈಲ್ ಫೋನ್ ಕುಮಾರಸ್ವಾಮಿ ನಿವಾಸದಲ್ಲಿ ನೀಡಿದ್ದರು ಎಂದು ವಿಚಾರಣೆ ವೇಳೆ ರಿತೇಶ್ ಪಾಂಡೆ ಬಾಯಿಬಿಟ್ಟಿದ್ದಾರೆ. ಸದ್ಯ ಪ್ರಜ್ವಲ್ ಪ್ರಸಾದ್ ನಾಪತ್ತೆ ಆಗಿದ್ದು, ಪ್ರಜ್ವಲ್ ಪ್ರಸಾದ್​​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ನೀಡಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪ್ರಜ್ವಲ್ ಹೇಳಿಕೆ ಬಳಿಕ ಕೇಂದ್ರ ಸಚಿವರ ಮನೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಸದ್ಯ ರಿತೇಶ್ ಹೇಳಿರೋದು ನಿಜಾನಾ ಸುಳ್ಳಾ ಅಂತ ಪರಿಶೀಲನೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

- Advertisement -

Related news

error: Content is protected !!