- Advertisement -




- Advertisement -
ಪುತ್ತೂರು: ಕಾಂಗ್ರೆಸ್ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಅವರ ಚುನಾವಣಾ ಏಜೆಂಟರಾಗಿ ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಖ್ಯಾತ ಸಿವಿಲ್ ವಕೀಲ ಭಾಸ್ಕರ ಗೌಡ ಕೊಡಿಂಬಾಳ ಅವರನ್ನು ನೇಮಕ ಮಾಡಲಾಗಿದೆ.
ಚುನಾವಣಾ ಆಯೋಗದ ನಿಯಮದ ಪ್ರಕಾರ ಅಭ್ಯರ್ಥಿಯ ಪರವಾಗಿ ಪ್ರತಿನಿಧಿಯನ್ನು ನಿಯೋಜಿಸಲು ಅವಕಾಶ ಇರುತ್ತದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಚಾಲಕರು ಆಗಿರುವ ಅವರು “ಬುತ್ತಿ ಊಟ” ಎಂಬ ಕೃತಿಯೊಂದಿಗೆ ಇತ್ತೀಚೆಗೆ ಸಾಹಿತ್ಯ ಕೃತಿಯನ್ನು ಪ್ರಕಟಿಸಿದ್ದಾರೆ.
ಮಂಗಳೂರು ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿರುವ ಭಾಸ್ಕರ ಗೌಡ ಅವರು ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಕರ್ನಾಟಕ ರಾಜ್ಯ ಮದ್ಯಸಂಯಮ ಮಂಡಳಿಯ ಮಾಜಿ ನಿರ್ದೇಶಕರಾಗಿದ್ದು, ಒಕ್ಕಲಿಗ ಗೌಡ ನ್ಯಾಯ ತೀರ್ಮಾನ ಸಮಿತಿಯ ಅಧ್ಯಕ್ಷ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ನಿಯೋಜಿತ ವಲಯ ಸೇನಾನಿಯಾಗಿದ್ದಾರೆ.
- Advertisement -