Monday, September 7, 2026
spot_imgspot_img
spot_imgspot_img

ಪುತ್ತೂರು: ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಕೊಂಬೆ ಬಿದ್ದು ಯುವಕ ಸಾವು..!

- Advertisement -
- Advertisement -
vtv vitla
vtv vitla

ಪುತ್ತೂರು: ಇಲ್ಲಿನ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಕೊಂಬೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಫೆ.9 ರಂದು ನಡೆದಿದೆ. ಮೃತ ವ್ಯಕ್ತಿ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಎನ್ನಲಾಗಿದೆ.

ಪುರುಷರಕಟ್ಟೆಯ ಬಳಿ ಕೆಲಸಗಾರರು ಮರ ಕಡಿಯುತ್ತಿದ್ದ ವೇಳೆ ಅಲ್ಲೆ ನಿಂತಿದ್ದ ಬಾತಿಷ್ ಸುಲ್ತಾನ್ ಅವರ ಮೇಲೆ ಆಕಸ್ಮಿಕವಾಗಿ ಗೆಲ್ಲು ಬಿದ್ದಿದೆ. ಇನ್ನು ಈ ವೇಳೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

- Advertisement -

Related news

error: Content is protected !!