- Advertisement -
- Advertisement -
ವಿಟ್ಲ: ವ್ಯಕ್ತಿಯೋರ್ವರು ಮನೆಯ ಸಮೀಪದ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಕಂಬ ಗ್ರಾಮದಲ್ಲಿ ನಡೆದಿದೆ.
ವೀರಕಂಬ ಗ್ರಾಮದ ಶಿಂಗೇರಿ ನಿವಾಸಿ ದಿವಂಗತ ತನಿಯಪ್ಪ ನಾಯ್ಕ ಅವರ ಪುತ್ರ ಹರೀಶ್ ನಾಯ್ಕ (46) ಆತ್ಮಹತ್ಯೆಗೆ ಶರಣಾದವರು.
ಹರೀಶ್ ನಾಯ್ಕ ಅವರು ಅವಿವಾಹಿತರಾಗಿದ್ದರು. ಇಂದು ಬೆಳಿಗ್ಗೆ ತಮ್ಮ ಮನೆಯ ಸಮೀಪದಲ್ಲಿರುವ ತೋಟದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








