Tuesday, December 3, 2024
spot_imgspot_img
spot_imgspot_img

ಪುತ್ತೂರು: ವಜ್ರಾಭರಣಗಳ ವಾರ್ಷಿಕ ಹಬ್ಬ ಗ್ಲೊ ಫೆಸ್ಟ್‌ಗೆ ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಚಾಲನೆ

- Advertisement -
- Advertisement -
vtv vitla

ಪುತ್ತೂರು: ಪ್ರತೀ ಡೈಮಂಡ್ ಕ್ಯಾರೆಟ್‌ನ ಮೇಲೆ ವಿಶೇಷ ಆಕರ್ಷಕ ರಿಯಾಯಿತಿ ನೀಡುವ ಮೂಲಕ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಈ ಬಾರಿಯ ‘ಗ್ಲೊ ಫೆಸ್ಟ್’ ಸಂಗ್ರಹ ಮಹಿಳೆಯರನ್ನು ಚಕಿತಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ಇಂತಹ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸುವ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಡೆಯುವ ವಾರ್ಷಿಕ ಹಬ್ಬ “ಗ್ಲೊ ಫೆಸ್ಟ್‌”ಗೆ ಡಿ.19ರಂದು ನಾಲ್ವರು ಮಹಿಳಾ ಸಾಧಕಿಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಪುತ್ತೂರು, ಸುಳ್ಯ, ಹಾಸನ ಹಾಗೂ ಕುಶಾಲನಗರಗಳಲ್ಲಿ ಮಳಿಗೆಗಳನ್ನು ಹೊಂದಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಸರ್‍ಸ್ ನ ಪುತ್ತೂರು ಮಳಿಗೆಯಲ್ಲಿ ಗ್ಲೊ ಫೆಸ್ಟ್
ಆಯೋಜಿಸಿಕೊಳ್ಳಲಾಗಿದೆ.

ನಾಲ್ವರು ಮಹಿಳಾ ಸಾಧಕಿಯರಾದ ವಿಶ್ವ ಕಲಾನಿಕೇತನ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟ್ಸ್ ಆಂಡ್‌ ಕಲ್ಚರಲ್‌ನ ವಿದುಷಿ ನಯನಾ ವಿ ರೈ , ಕರ್ನಾಟಕ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಜಿ ನೋಡೆಲ್ ಅಧಿಕಾರಿ, ದಿ ಸಿಕ್ಸ್ ಆಂಡ್ ಕೋ ಪುತ್ತೂರು ಮತ್ತು ಬಿ ವೆಲ್ ಫಾರ್ಮ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನಿಲ ದೀಪಕ್ ಶೆಟ್ಟಿ, ಎಸ್‌ಡಿಪಿ ರೆಮಿಡಿಸ್ ಮತ್ತು ರಿಸರ್ಚ್ ಸೆಂಟರ್‌ನ ಮ್ಯಾನೇಜಿಂಗ್ ಪಾಲುದಾರೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆಕಾರ್ಯದರ್ಶಿ ರೂಪಲೇಖ, ಮೇಘ ಫ್ರುಟ್ಸ್ ಆಂಡ್ ಪ್ರೊಸೆಸಿಂಗ್ ಪ್ರೈವೆಟ್ ಲಿ.ನ ಕಾರ್ಯನಿರ್ವಾಹಕ ಅಧಿಕಾರಿ ರಂಜಿತಾ ಶಂಕರ್ ‘ಗ್ಲೊ ಫೆಸ್ಟ್’ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಸಾದ್ ಎನ್.ಕೆ ಸ್ವಾಗತಿಸಿ, ವಂದಿಸಿದರು. ಹೊಸತನ ಪರಿಚಸುವುದು ನಮ್ಮ ಉದ್ದೇಶ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‍ಸ್ ನ ಮಾಲಕ ಬಲರಾಮ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 8 ವರ್ಷಗಳಿಂದ ಗ್ಲೊ ಫೆಸ್ಟ್ ಮಾಡುತ್ತಾ ಬಂದಿದ್ದೇವೆ. ಪ್ರ ಗ್ಲೊ ಫೆಸ್ಟ್‌ನಲ್ಲಿಲ ಹೊಸತನದ ಪರಿಚಯ ಆಗಬೇಕೆಂಬುದು ನಮ್ಮ ಉದ್ದೇಶ. ಇದರಿಂದ ಗ್ರಾಹಕರಿಗೆ ಏನಾದರೂ ಒಂದು ಹೊಸತು ಆಯ್ಕೆಗೆ ಸಿಗಬೇಕು. ಅದೇ ರೀತಿ ಆರಂಭದಲ್ಲಿ ವಜ್ರಾಭರಣಗಳನ್ನು ಕಣ್ಣಿನಿಂದ ಪರೀಕ್ಷೆ ಮಾಡುವ ವ್ಯವಸ್ಥೆ. ಇವತ್ತು ಅತ್ಯಾಧುನಿಕ ಯಂತ್ರಗಳು ಬಂದಿವೆ. ಅದೇ ರೀತಿ ಗುಣಮಟ್ಟದ ಪ್ರಮಾಣಪತ್ರವೂ ನೀಡಲಾಗುತ್ತದೆ ಮತ್ತು ಹೊಸ ಹೊಸ ವಿನ್ಯಾಸಗಳಲ್ಲಿ ಹೊಸತನ ಬಂದಿದೆ ಎಂದರು. ಬಲರಾಮ ಆಚಾರ್ಯರವರ ಪತ್ನಿ ರಾಜಿ ಬಲರಾಮ ಆಚಾರ್ಯ ಹಾಗೂ ಪುತ್ರರಾದ ಸುದನ್ವ ಆಚಾರ್ಯ, ಲಕ್ಷ್ಮೀ ಕಾಂತ್ ಆಚಾರ್ಯ, ಸೊಸೆ ಮೇಘ ಸುದನ್ವ ಆಚಾರ್ಯ ಸಹಿತ ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗ್ಲೋ ಫೆಸ್ಟ್‌ನಲ್ಲಿ ವಿಶೇಷ ರಿಯಾಯಿತಿಗಳು ಪ್ರದರ್ಶನ ಮತ್ತು ಮಾರಾಟದ ಅವಧಿಯಲ್ಲಿ ಗ್ರಾಹಕರು ತಾವು ಖರೀದಿಸುವ ವಜ್ರಾಭರಣಗಳಲ್ಲಿ ಪ್ರತೀ ಡೈಮಂಡ್ ಕ್ಯಾರೆಟ್‌ನ ಮೇಲೆ ರೂ.5000 ಮತ್ತು ಆಯ್ದ ವಜ್ರಾಭರಣ ಖರೀದಿಯಲ್ಲಿ ರೂ.7000 ವರೆಗೆ ರಿಯಾಯಿತಿ ಪಡೆಯಬಹುದು. ಜೊತೆಗೆ ಡಿಜಿಟಲ್ ಪಾವತಿಗೆ ಪ್ರತಿ ಕ್ಯಾರೆಟ್‌ಗೆ ರೂ. 500 ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಬಣ್ಣಗಳು, ಆಕಾರ ಮತ್ತು ಸ್ಪಷ್ಟತೆಯುಳ್ಳ ವಿಭಿನ್ನ ಶೈಲಿಯ ವಜ್ರಾಭರಣಗಳು ಲಭ್ಯವಿದೆ.

- Advertisement -

Related news

error: Content is protected !!