Sunday, August 14, 2022
spot_imgspot_img
spot_imgspot_img

ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನವನ್ನೆ ಎಗರಿಸಿದ ಖದೀಮ..!

- Advertisement -G L Acharya G L Acharya
vtv vitla
vtv vitla
- Advertisement -

ಧಾರವಾಡ: ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನ ಕಳ್ಳತನವಾಗಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆ ಎದುರು ನಡೆದಿದೆ. ಆರೋಪಿ ಅಣ್ಣಿಗೇರಿ ಪಟ್ಟಣದ ಅಂಬಿಕಾ ನಗರ ನಿವಾಸಿ ನಾಗಪ್ಪ ಹಡಪದ ಎನ್ನಲಾಗಿದೆ.

ಈತ ಪೊಲೀಸ್ ಠಾಣೆಯ ಕೆಲಸಕ್ಕೆ ಬಳಸುತ್ತಿದ್ದ ಬೊಲೆರೋ ವಾಹನದೊಂದಿಗೆ ಬ್ಯಾಡಗಿವರೆಗೂ ಹೋಗಿದ್ದಾರೆ. ಸದ್ಯ ಪೊಲೀಸರು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ವಾಹನ ಪತ್ತೆ ಹಚ್ಚಿ ಆರೋಪಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ.

ಸಿಬ್ಬಂದಿ ವಾಹನ ಬಳಸಿ ವಾಹನದಲ್ಲೇ‌ ಕೀ ಬಿಟ್ಟಿದ್ದರು. ಇದನ್ನು ಗಮನಿಸಿದ ನಾಗಪ್ಪ ಹಡಪದ ವಾಹನವನ್ನು ತೆಗೆದುಕೊಂಡು ಬ್ಯಾಡಗಿವರೆಗೆ ಹೋಗಿದ್ದಾರೆ.

ಸದ್ಯ ತಕ್ಷಣ ಎಚ್ಚೆತ್ತ ಪೊಲೀಸರು ವಾಹನವನ್ನು ಹಿಂಬಾಲಿಸಿ ವಾಹನ ಸಮೇತ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕಳ್ಳತನವಾಗಿದ್ದ ವಾಹನವನ್ನು ನಿತ್ಯ ಬೆಳಗ್ಗೆ ರೌಂಡ್ಸ್ ಹೋಗಲು ಬಳಸುತ್ತಿದ್ದರು. ಈ ಬಗ್ಗೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!