Friday, August 19, 2022
spot_imgspot_img
spot_imgspot_img

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 7 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದ ಬಿಲ್ಲವ ಬ್ರಿಗೇಡ್ ( ರಿ ) ಕೇಂದ್ರೀಯ ಮಂಡಳಿ ಮಂಗಳೂರು; ಮನೆ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ

- Advertisement -G L Acharya G L Acharya
- Advertisement -

ದುಷ್ಕರ್ಮಿಗಳ ರಕ್ತದಾಹಕ್ಕೆ ಬಲಿಯಾದ ನಮ್ಮ ಸಮುದಾಯದ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರುರವರ ಮನೆಗೆ ನಮ್ಮ ಬಿಲ್ಲವ ಬ್ರಿಗೇಡ್ ಸಂಘಟನೆಯ ಹಿರಿಯರು ಮತ್ತು ಸಮಾಜದ ಮುಖಂಡರುಗಳ ನೇತೃತ್ವದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರು ಭೇಟಿ ನೀಡಿದ್ದಾರೆ.

ಈ ಸಂಧರ್ಭ ಮೃತ ಪ್ರವೀಣ್ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿ ಸಂಘಟನೆಯ ವತಿಯಿಂದ 7 ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು.

ಜೊತೆಗೆ ಪ್ರವೀಣ್ ಅವರ ಕನಸಾಗಿದ್ದ ಹೊಸ ಮನೆಯ ನಿರ್ಮಾಣಕ್ಕೆ 3D ನಕ್ಷೆಯ ಸಹಿತ ಗುತ್ತಿಗೆದಾರರೊಂದಿಗೆ ತೆರಳಿ ಮನೆ ನಿರ್ಮಾಣ ಮಾಡಿ ಕೊಡುವುದಾಗಿ ಸಂಘಟನೆ ಮತ್ತು ಬಿಲ್ಲವ ಸಮಾಜದ ಮುಖಂಡರು ಮಾತು ಕೊಟ್ಟಿದ್ದು ಕೊಟ್ಟ ಮಾತಿನಂತೆ ಆದಷ್ಟು ಬೇಗ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.

ಹಾಗೂ, ಪ್ರವೀಣ್ ಅವರ ಕುಟುಂಬದ ಜೊತೆಗೆ ನಮ್ಮ ಸಂಘಟನೆ ಮತ್ತು ಸಮಸ್ತ ಬಿಲ್ಲವ ಸಮಾಜ ಬಾಂಧವರು ಯಾವತ್ತೂ ನಿಲ್ಲಲಿದ್ದು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಂದರ್ಭ ಹಿರಿಯ ಬಿಲ್ಲವ ನಾಯಕರಾದ ಭಾಸ್ಕರ್ ಕೋಟಿಯನ್ ಕೊಳಕೆ ಇರ್ವತುರ್,ಬೆಂಗಳೂರಿನ ಯುವ ಉದ್ಯಮಿ ಶರತ್ ಚಂದ್ರ ಸನಿಲ್, ಗಂಗಾದರ ಪೂಜಾರಿ ಪಣಿಯೂರು, ಸದಾನಂದ ಪೂಜಾರಿ, ಶಂಕರ್ ಕುಂದರ್ ಸೂಡ , ದಿವ್ಯಶ್ರೀ ಗಿರೀಶ್ ಆಮೀನ್ , ಸತೀಶ್ ಪೂಜಾರಿ ಬೋಳ, ವಿಜಯ ಕುಮಾರ್ ಕಾರ್ಕಳ, ಹರೀಶ್ ಆಮೀನ್ ಗುಂಡ್ಯಾಡ್ಕ, ಸತೀಶ್ ನಾಯಕ್. ಹರೀಶ್ ಮುನಿಯಲ್, ಜಗದೀಶ್ ಪೂಜಾರಿ ಸಾನೂರ್ , ರತ್ನಾಕರ್ ಆಮೀನ್, ಪ್ರಕಾಶ್ ರಾವ್, ಸೂರಜ್ ಕುಮಾರ್ ಕಲ್ಯ , ಸಂದೀಪ್ ಪೂಜಾರಿ ಶಕ್ತಿನಗರ, ಅವಿನಾಶ್ ಸುವರ್ಣ ಬಜಿಲಕೆರಿ, ಜೀವನ್ ಪೂಜಾರಿ ನೀರ್ ಮಾರ್ಗ, ಕಿಶನ್ ಆಮೀನ್ ಕಾಟಿಪಳ್ಳ, ದೀಪಕ್ ಪೂಜಾರಿ ಮಂಗಳಾದೇವಿ, ಪ್ರಶಾಂತ್ ಪೂಜಾರಿ ಮಂಗಳಾದೇವಿ, ವಿವೇಕ್ ಆಮೀನ್, ದೀಪಕ್ ಆಡುಮರೋಲಿ ,ರಾಹುಲ್ ಮರ್ನೆಮಿಕಟ್ಟೆ ಮತ್ತು ಬಿಲ್ಲವ ಬ್ರಿಗೇಡ್‌ನ ಸದಸ್ಯರು ಉಪಸ್ಥಿತರಿದರು.

- Advertisement -

Related news

error: Content is protected !!