Friday, April 26, 2024
spot_imgspot_img
spot_imgspot_img

ವಿಟ್ಲ: ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಘಪರಿವಾರ ಸಮುದಾಯಗಳ ನಡುವೆ ಎತ್ತಿಕಟ್ಟಿಕೊಂಡು ಗಲಭೆಗೆ ಸಂಚು ರೂಪಿಸುತ್ತಿದೆ; SDPI ಆಕ್ರೋಶ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರವು ಕಳೆದ ಹಲವಾರು ತಿಂಗಳುಗಳಿಂದ ಇಲ್ಲಿನ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಭೆಗೆ ಸಂಚು ರೂಪಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಸಾಲೆತ್ತೂರು ಎಂಬಲ್ಲಿ ಮದುವೆಯ ಮನೆಯಲ್ಲಿ ನಡೆದ ಘಟನೆಯೊಂದನ್ನು ಮುಂದಿಟ್ಟುಕೊಂಡು ಕೊರಗ ಸಮುದಾಯ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಹಾಗೂ ಹಿಂದೂ ಸಮುದಾಯದ ಭಾವನೆಗಳನ್ನು ಎಳೆದು ತಂದು ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಿ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ.

ಈ ಬಗ್ಗೆ ವಿಟ್ಲದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ನಿರಂತರವಾಗಿ ದಲಿತ ಸಮುದಾಯವನ್ನು ಶೋಷಣೆಗೆ ಗುರಿಯಾಗಿಸುತ್ತಾ ಬಂದಿರುವ ಸಂಘಪರಿವಾರವು ಈ ಒಂದು ಘಟನೆಯ ವಿಚಾರವಾಗಿ ಕೊರಗ ಸಮುದಾಯದ ಪ್ರೀತಿ ಮೂಡಲು ಇಲ್ಲಿ ಗಲಭೆ ನಡೆಸಲು ಇರುವ ಷಡ್ಯಂತ್ರ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕೊರಗ ಸಮುದಾಯವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿಕೊಂಡು ಜಿಲ್ಲೆಯಲ್ಲಿ ಸೌಹಾರ್ದತೆಗೆ ಧಕ್ಕೆ ತರುವ ರೀತಿಯ ಪಕ್ಷದ ವಾತಾವರಣ ನಿರ್ಮಿಸುತ್ತಿದೆ.

vtv vitla

ಮಧುಮಗ ಹಾಕಿದ ಡ್ರೆಸ್’ಕೋಡ್ ಗೂ ಕೊರಗ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಲವು ದಲಿತ ಸಮುದಾಯದ ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಆದಾಗ್ಯು ಸಂಘಪರಿವಾರವು ಮುಸ್ಲಿಮರು ಎಂಬ ಏಕ ಕಾರಣಕ್ಕೆ ಮುಸ್ಲಿಂ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಟ್ಟಹಾಸ ಮೆರೆಯುತ್ತಿದೆ. ಇದಕ್ಕೆ ಇಲ್ಲಿನ ಪೋಲಿಸ್ ಇಲಾಖೆ ಬೆಂಗಾವಲಾಗಿ ನಿಂತುಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಿರುವುದು ಖಂಡನೀಯ, ಅಲ್ಲದೆ ಮದುಮಗಳ ಮನೆಗೆ ಭಜರಂಗದಳ ಕಾರ್ಯಕರ್ತರು ನುಗ್ಗಲು ಪ್ರಯತ್ನಿಸಿರುವುದರ ವಿರುದ್ಧ ಪೋಲಿಸ್ ಇಲಾಖೆ ಸುಮೋಟೊ ಪ್ರಕರಣ ದಾಖಲಿಸದಿರುವುದು ಜನಸಾಮನ್ಯರ ನಡುವೆ ಗೊಂದಲ ಸೃಷ್ಟಿಸಿದೆ.

ಸಾಲೆತ್ತೂರಿನ ಘಟನೆಯ ವಿಚಾರವಾಗಿ ಸಂಘಪರಿವಾರದ ಗೂಂಡಾ ನಾಯಕ ಶರಣ್ ಪಂಪೈಲ್ ಮದುಮಗನ ಕುಟುಂಬದವರನ್ನು ಜಮಾಅತ್‌ನಿಂದ ಹೊರಹಾಕಿ ಪತ್ವ ಹೊರಡಿಸಲು ಕರೆ ನೀಡಿದ್ದಾನೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸದಾ ಬಕ ಪಕ್ಷಿಯಂತೆ ಕಾಯುತ್ತಿರುವ ಈತನಿಗೆ ಈ ಘಟನೆಯಲ್ಲಿ ಮಾತನಾಡುವ ಯಾವ ನೈತಿಕತೆ ಇದೆ ಎಂದು ಎಸ್.ಡಿ.ಪಿ.ಐ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಶಾಹುಲ್ ಹಮೀದ್ ಕ್ಷೇತ್ರಾಧ್ಯಕ್ಷರು, ಎಸ್.ಡಿ.ಪಿ.ಐ ಬಂಟ್ವಾಳ, ಕಲಂದರ್ ಪರ್ತಿಪಾಡಿ ಕ್ಷೇತ್ರ ಉಪಾಧ್ಯಕ್ಷರು ಎಸ್.ಡಿ.ಪಿ.ಐ ಬಂಟ್ವಾಳ, ಅನ್ವರ್‌ ಪೆರುವಾಯಿ ಜೊತೆ ಕಾರ್ಯದರ್ಶಿ, ಎಸ್.ಡಿ.ಪಿ.ಐ ಪುತ್ತೂರು, ಬಶೀರ್ ಕೊಳ್ನಾಡು ಬ್ಲಾಕ್ ಅಧ್ಯಕ್ಷರು, ಎಸ್.ಡಿ.ಐ ಕೊಳ್ನಾಡು ಉಪಸ್ಥಿತರಿದ್ದರು.

- Advertisement -

Related news

error: Content is protected !!