- Advertisement -
- Advertisement -
ನವದೆಹಲಿ: ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ ಸರ್ಕಾರದ 3,000 ಕೋಟಿ ಹಣ ಫಲಾನುಭವಿ ರೈತರಲ್ಲದವರ ಪಾಲಾಗಿದೆ ಎಂದು ಅಧಿವೇಶನದಲ್ಲಿ ಕೇಂದ್ರ ಕೃಷಿ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಈ ಹಣವನ್ನ ಮತ್ತೆ ವಾಪಸ್ ಪಡೆದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳಿದೆ.

4 ರಾಜ್ಯಗಳಲ್ಲಿ ಅತೀ ಹೆಚ್ಚು ಹಣ ವಂಚನೆ..?
ಅಸ್ಸಾಂನಲ್ಲಿ 554 ಕೋಟಿ ಹಣ 8.35 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ.ತಮಿಳುನಾಡಿನಲ್ಲಿ 340 ಕೋಟಿ ಹಣ 7.22 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ.

ಪಂಜಾಬ್ನಲ್ಲಿ 437 ಕೋಟಿ ಹಣ 5.62 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ. ಮಹರಾಷ್ಟ್ರದಲ್ಲಿ 357 ಕೋಟಿ ಹಣ 4.45 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ.

ಒಟ್ಟು 42 ಲಕ್ಷ ಮಂದಿ ಫಲಾನುಭವಿಗಳಲ್ಲದ ರೈತರ ಅಕೌಂಟ್ಗಳಿಗೆ ಕಿಸಾನ್ ಸಮ್ಮಾನ್ ನಿಧಿ ಹಣ ವರ್ಗಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.



- Advertisement -