Thursday, April 25, 2024
spot_imgspot_img
spot_imgspot_img

ಎರಡು ಹೊಸ ಕೃಷಿ ಮಸೂದೆ ರೈತರ ಆರ್ಥಿಕ ಸ್ಥಿತಿ ಬದಲಾಯಿಸಲಿದೆ: ಪ್ರಧಾನಿ ನರೇಂದ್ರ ಮೋದಿ

- Advertisement -G L Acharya panikkar
- Advertisement -

ಬಿಹಾರ: ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಎರಡು ಹೊಸ ಕೃಷಿ ಮಸೂದೆಗಳ ಬಗ್ಗೆ ಎದ್ದಿರುವ ಊಹಾಪೋಹಗಳ ಕುರಿತಂತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕೃಷಿ ಕಾನೂನಿನ ಕುರಿತಾಗಿ ಇರುವ ವಾಸ್ತವ ಚಿತ್ರಣವನ್ನು ಇಂದು ಬಿಚ್ಚಿಟ್ಟಾರೆ.

ಬಿಹಾರದ ಎಲ್ಲ 45,945 ಗ್ರಾಮಗಳಿಗೆ ಆಫ್ಟಿಕಲ್ ಫೈಬರ್ ಇಂಟರ್​ನೆಟ್​ ಸೇವೆಯ ಮೂಲಕ ಸಂಪರ್ಕ ಕಲ್ಪಿಸುವ ಆಫ್ಟಿಕಲ್ ಫೈಬರ್ ಕೇಬಲ್​ ಸೇವೆ ಹಾಗೂ 14,000 ಕೋಟಿ. ರೂ. ಮೌಲ್ಯದ 9 ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ ಮೇಲೆ ಮಾತನಾಡಿದ ಪ್ರಧಾನಿ ಜಾರಿಯಾಗಲಿರುವ ಕೃಷಿ ಕಾನೂನಿನ ಕುರಿತಂತೆ ವಿವರಣೆ ನೀಡಿದರು.

ರೈತರನ್ನು ಎಲ್ಲಾ ಸಂಕೋಲೆಗಳಿಂದ ಬಂಧಮುಕ್ತ ಮಾಡಲು ಜಾರಿಗೊಂಡಿರುವ ಕಾನೂನು ಇದು. ಇಲ್ಲಿಯವರೆಗೆ ಇದ್ದ ಕೆಲವು ನಿಯಮಗಳಿಂದಾಗಿ ರೈತರ ಕೈ ಕಾಲು ಕಟ್ಟಿಹಾಕಿದಂತೆ ಆಗಿತ್ತು. ಅದರಿಂದ ರೈತಾಪಿ ವರ್ಗದವರನ್ನು ಬಂಧಮುಕ್ತಗೊಳಿಸಿ, ತಾವು ಬೆಳೆದಿರುವ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಲು ಅನುಕೂಲ ಕಲ್ಪಿಸುವಂಥ ಕಾನೂನು ಜಾರಿಗೊಳ್ಳಲಿದೆ ಎಂದು ಮೋದಿ ಹೇಳಿದರು.

ಇನ್ನುಮುಂದೆ ರೈತರು ತಮ್ಮದೇ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು. ಮಂಡಿಯ ಮೇಲೆ ಅವಲಂಬಿತರಾಗಿ ಇರುವ ಅವಶ್ಯಕತೆಯೇ ಇಲ್ಲ. ಒಂದು ವೇಳೆ ಮಂಡಿಯ ಹೊರಗಡೆ ಅವರಿಗೆ ತಕ್ಕದಾದ ಬೆಲೆ ಸಿಗುವುದಾದರೆ, ಅಲ್ಲಿಯೇ ಅವರು ಬೆಳೆಗಳನ್ನು ಮಾರಾಟ ಮಾಡಬಹುದು, ಮಂಡಿಯಲ್ಲಿ ಅಧಿಕ ಲಾಭ ಸಿಕ್ಕರೆ ಅಲ್ಲಿ ಕೊಡಬಹುದು. ಇನ್ನುಮುಂದೆ ಯಾವುದೇ ದಿಗ್ಬಂಧನ ರೈತರಿಗೆ ಇರುವುದಿಲ್ಲ ಎಂದು ಪ್ರಧಾನಿ ವಿವರಿಸಿದರು.

ಇದೇ ವೇಳೆ ಈ ಹೊಸ ಕಾನೂನು ಜಾರಿಗೆ ಬಂದರೆ ಮಂಡಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಸುಖಾಸುಮ್ಮನೆ ಊಹಾಪೋಹಗಳನ್ನು ಎಬ್ಬಿಸಲಾಗಿದೆ ಎಂದು ಹೇಳಿದ ಮೋದಿ, ಈ ಬಗ್ಗೆ ಮಂಡಿ ಮಾಲೀಕರು ಯಾವುದೇ ಕಾರಣಕ್ಕೂ ಚಿಂತೆ ಪಡಬೇಕಾಗಿಲ್ಲ. ಇದಾಗಲೇ ಮಂಡಿಗಳನ್ನು ಆಧುನೀಕರಣಗೊಳಿಸಲು ತಮ್ಮ ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆಧುನಿಕ ತಂತ್ರಜ್ಱಆನಗಳನ್ನು ಅಳವಡಿಸಲು ಪ್ರೇರೇಪಿಸಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಯಾರೋ ಹೇಳುವ ಗಾಳಿಸುದ್ದಿಗೆ ಕಿವಿಕೊಡಬೇಡಿ ಎಂದು ತಿಳಿಸಿದರು.

ಇದು ಹೇಗೆ ರೈತರಿಗೆ ಸಹಕಾರಿಯಾಗಲಿದೆ, ಈ ಹಿಂದೆ ಇದ್ದ ಸಂಕೋಲೆಗಳಿಂದ ಇದು ರೈತರನ್ನು ಹೇಗೆ ಮುಕ್ತಮಾಡಲಿದೆ ಎಂಬ ಬಗ್ಗೆ ಹಲವಾರು ಉದಾಹರಣೆಗಳನ್ನು ಪ್ರಧಾನಿ ನೀಡಿದರು,. ಒಂದು ವೇಳೆ ಯಾರೋ ಒಬ್ಬರು ಚಿಪ್ಸ್​ ತಯಾರಿಕೆಯ ಸ್ಟಾರ್ಟ್​ಅಪ್​ ಮಾಡಬೇಕು ಎಂದುಕೊಂಡಿದ್ದರೆ, ಅವರು ಇನ್ನುಮುಂದೆ ಮಂಡಿಗೆ ಹೋಗಿ ಕೇಳಬೇಕಿಲ್ಲ. ಬದಲಿಗೆ ರೈತರ ಬಳಿಯೇ ನೇರವಾಗಿ ಹೋಗಿ ತಮ್ಮ ಅನುಕೂಲಕ್ಕೆ ತಕ್ಕ ಆಲೂಗಡ್ಡೆಗಳನ್ನು ರೈತರು ನಿಗದಿ ಮಾಡಿರುವ ಬೆಲೆಗೆ ನೀಡಿ ಖರೀದಿ ಮಾಡಬಹುದು. ಅದೇ ರೀತಿ ಎಣ್ಣೆಬೀಜಗಳನ್ನು ಬೆಳೆಯುತ್ತಿದ್ದರೆ, ನೇರವಾಗಿ ಮಿಲ್​ನವರು ಅವರಿಂದ ಖರೀದಿ ಮಾಡಬಹುದು. ಈ ಮೊದಲು ಹೀಗೆ ಮಾಡಲು ಕೆಲವೊಂದು ತೊಡಕುಗಳು ಇದ್ದವು. ಆದರೆ ಅವೆಲ್ಲವುಗಳಿಂದ ಇಂದು ರೈತ ಮುಕ್ತನಾಗಲಿದ್ದಾನೆ ಎಂದು ಪ್ರಧಾನಿ ಹೇಳಿದರು.

ಅಗತ್ಯವಸ್ತುಗಳ ಕಾಯ್ದೆ (ಅಸೆನ್ಷಿಯಲ್​ ಕಮಾಡಿಟಿ ಆಯಕ್ಟ್​) ಅಡಿಯಲ್ಲಿ ರೈತರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಅವರು ಸ್ಟೋರ್​ ಹೌಸ್​ ಸೇರಿದಂತೆ ಕೆಲವು ಕಡೆಗಳಲ್ಲಿ ತಮ್ಮ ಆಹಾರಧಾನ್ಯಗಳನ್ನು ಶೇಖರಣೆ ಮಾಡಿ ಇಡಲು ನಿರ್ಬಂಧ ವಿಧಿಸಲಾಗಿತ್ತು. ಆದರೆ ಇದೀಗ ಅವುಗಳಿಂದಲೂ ರೈತರನ್ನು ಮುಕ್ತ ಮಾಡಲಾಗಿದೆ. ರೈತರು ತಮ್ಮ ಇಚ್ಛೆಯಂತೆ ತಮ್ಮ ಆಹಾರ ಧಾನ್ಯಗಳನ್ನು ಶೇಖರಣೆ ಮಾಡಿ ಇಡಬಹುದಾಗಿದೆ ಎಂದು ಸ್ಪಷ್ಟನೆ ನೀಡಿದರು.

 ಇಷ್ಟೆಲ್ಲಾ ಸೌಲಭ್ಯ ಇರುವಾಗ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿರುವವರ ಬಗ್ಗೆ ಕಿಡಿ ಕಾರಿದ ಪ್ರಧಾನಿ, ಒಂದು ವಿಷಯ ನೆನಪಿಟ್ಟುಕೊಳ್ಳಿ. ಈಗ ಯಾರ್ಯಾರು ಈ ಹೊಸ ಕಾಯ್ದೆಯ ಬಗ್ಗೆ ಟೀಕೆ ಮಾಡಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೋ ಅಥವಾ ಮಾಡುತ್ತಿದ್ದಾರೋ, ಅವರಿಗೆಲ್ಲಾ ಇರುವ ಒಂದೇ ಒಂದು ಸಮಸ್ಯೆ ಎಂದರೆ, ಅವರು ರೈತರ ಹೆಸರನ್ನು ಹೇಳಿಕೊಂಡು ತಾವು ಲೂಟಿಗೆ ಇಳಿಯುತ್ತಿದ್ದರು. ಆದರೆ ಈ ಹೊಸ ಕಾಯ್ದೆಗಳಿಂದ ರೈತರಿಗೇ ಎಲ್ಲಾ ರೀತಿಯ ಸೌಕರ್ಯ ಕೊಟ್ಟಿರುವ ಹಿನ್ನೆಲೆಯಲ್ಲಿ ಅವರು ಇನ್ನು ಲೂಟಿ ಮಾಡಲು ಸಾಧ್ಯವಿಲ್ಲವಾಗಿದೆ ಎಂದು ಕಟುವಾಗಿ ನುಡಿದರು.

ರೈತರ ಹೆಸರನ್ನು ಹೇಳಿಕೊಂಡು ಈ ಮೊದಲು ಇದ್ದ ಸರ್ಕಾರಗಳು ಮಾಡಿರುವ ಯೋಜನೆ ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ರೈತರಿಗೆ ಆಗಿರುವ ಪ್ರಯೋಜನಗಳ ಬಗ್ಗೆ ನೀವೇ ಖುದ್ದಾಗಿ ಪರೀಶೀಲನೆ ಮಾಡಿದರೆ ಸತ್ಯ ನಿಮಗೇ ತಿಳಿಯುತ್ತದೆ. ಆದ್ದರಿಂದ ಇಂಥ ವದಂತಿಗಳಿಗೆ ಕಿವಿಕೊಡಬೇಕು. ಇದು ರೈತರಿಗೆ ಎಲ್ಲಾ ರೀತಿಯ ಅನುಕೂಲಕರ ಕಾಯ್ದೆಯಾಗಿದೆ ಎಂದರು.

ಇದೇ ವೇಳೆ ಚಿಕ್ಕ ಚಿಕ್ಕ ಜಮೀನು ಉಳ್ಳವರು ಪ್ರತ್ಯೇಕವಾಗಿ ಉಳುಮೆ ಮಾಡಿ, ಆಹಾರ ಧಾನ್ಯಗಳನ್ನು ಮಾರಾಟ ಮಾಡುವ ಬದಲು ಸಂಘಟಿತರಾಗಿ ಒಟ್ಟಿಗೇ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಲಾಭ ಗಳಿಸಬಹುದು ಎಂಬ ಕಿವಿಮಾತನ್ನೂ ಹೇಳಿದರು.


- Advertisement -

Related news

error: Content is protected !!