Friday, August 19, 2022
spot_imgspot_img
spot_imgspot_img

ಬಂಟರ ಸಂಘ ಕಲ್ಲಡ್ಕ ವಲಯದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

- Advertisement -G L Acharya G L Acharya
- Advertisement -

ಬಂಟ್ವಾಳ: ಬಂಟರ ಸಂಘ ಕಲ್ಲಡ್ಕ ವಲಯ (ಗೋಳ್ತಮಜಲು, ಅಮ್ಟೂರು, ವೀರಕಂಭ, ಬಾಳ್ತಿಲ, ಪಾಣೆಮಂಗಳೂರು, ಶಂಭೂರು, ನರಿಕೊಂಬು) ಇದರ ಆಶ್ರಯದಲ್ಲಿ ಸತ್ಯಶ್ರೀ ಕಲ್ಯಾಣ ಮಂಟಪ ಪಾಣೆಮಂಗಳೂರಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಮೊದಲು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯ ಬಂಟರ ಸಂಘದ ಕೆ ಪದ್ಮನಾಭ ರೈ ಕಲ್ಲಡ್ಕ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಶ್ರೀ ದುರ್ಗಾ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈ ಲಿ ಇದರ ಸಚ್ಚಿದಾನಂದ ಶೆಟ್ಟಿ ಅರೆಬೆಟ್ಟು, ಬಂಟ್ವಾಳ ತಾಲೂಕು ಬಂಟರ ಸಂಘದ ಜೊತೆ ಖಜಾಂಚಿ ಪ್ರತಿಭಾ ಎ ರೈ, ಬಂಟ್ವಾಳ ತಾಲೂಕು ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ, ಬಂಟ್ವಾಳ ತಾಲೂಕು ಬಂಟರ ಸಂಘದ ಖಜಾಂಚಿ ಸುಜತಾ ಪಿ ರೈ ಕಲ್ಲಡ್ಕ ಆಗಮಿಸಿದ್ದರು. ಆಟಿ ತಿಂಗಳ ಮಹತ್ವದ ಬಗ್ಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಹಾಗೂ ಟಿ ವಿ ನಿರೂಪಕ ನವನೀತ್ ಶೆಟ್ಟಿ ಕದ್ರಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಜತ್ತಪ್ಪ ಶೆಟ್ಟಿ ದಯಾನಂದ ಶೆಟ್ಟಿ ಹೊಸಲಚ್ಚಿಲು, ರಾಮಣ್ಣ ಶೆಟ್ಟಿ ಗೋಳ್ತಮಜಲು, ಶೀಲಾ ಶೆಟ್ಟಿ ಬೂಡಾಡಿ, ಕಮಲ ಶೆಟ್ಟಿ ಅಂತರ, ಲಕ್ಷ್ಮೀ ವಿ ಶೆಟ್ಟಿ ಬೊಂಡಾಲ ಇವರಿಗೆ ಸನ್ಮಾನ ಮಾಡಲಾಯಿತು. ನಂತರ ತುಳುನಾಡ ಬಲೀಂದ್ರ ಯಕ್ಷಗಾನ ತಾಳಮದ್ದಳೆ ನಡೆಯಿತು.

- Advertisement -

Related news

error: Content is protected !!