Monday, August 3, 2026
spot_imgspot_img
spot_imgspot_img

ಬಂಟ್ವಾಳ: ಕಾಶೀ ಮಠದ ವೃಂದಾವನಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ

- Advertisement -
- Advertisement -
vtv vitla
vtv vitla

ಮಂಗಳೂರು: ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ 6 ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಯು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಆದಿತ್ಯವಾರ ನೆರವೇರಿತು .

ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಪ್ರಯುಕ್ತ ಶಾಖಾ ಮಠದಲ್ಲಿ 10 ದಿನಗಳ ಪರ್ಯಂತ 108 ನಾರೀಕೇಳ ಗಣಹೋಮ , ಶ್ರೀ ಭಾಗವತ ಸಪ್ತಾಹ , ಶ್ರೀ ಸುದರ್ಶನ ಹವನ , ಶ್ರೀ ಭೂ ವರಾಹ ಹವನ , ಶ್ರೀ ನರಸಿಂಹ ಹವನ , ಶ್ರೀ ವಾಯುಸ್ತುತಿ ಹವನ , ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ , ದುರ್ಗಾ ನಮಸ್ಕಾರ , ಚಂಡಿಕಾ ಹವನ , ದಶಮ ಸ್ಕಂದ ಹವನ , ಸುಂದರಕಾಂಡ ಹವನಗಳು ಶ್ರೀಗಳವರ ಮಾರ್ಗದರ್ಶನದಲ್ಲಿ ನೆರವೇರಿದವು , ಪುನಃ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿಖರ ಕಲಶ ಅಧಿವಾಸ ಕಾರ್ಯಕ್ರಮಗಳು ವೈದಿಕ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನಡೆದವು.

vtv vitla
vtv vitla

ಆದಿತ್ಯವಾರ 10:46 ರ ಕುಂಭ ಲಗ್ನ ಮುಹೂರ್ತದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಿತು ಬಳಿಕ ರಾತ್ರಿ ಶ್ರೀ ಮಾಧವೇಂದ್ರ ಸಭಾ ಸದನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು . ಶ್ರೀಗಳವರಿಂದ ದಾನಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಬಳಿಕ ಶ್ರೀಗಳವರ ಆಶೀರ್ವಚನ ನೆರವೇರಿತು.

ಈ ಸಂದರ್ಭದಲ್ಲಿ ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಭಾಮಿ ನಾರಾಯಣ್ ಶೆಣೈ , ವೆಂಕಟ್ರಾಯ ಪೈ , ಜೆ . ಪುರುಷೋತ್ತಮ್ ಪೈ , ಬಿ . ಶಿವರಾಯ ಪ್ರಭು , ಬಿ . ಗಣೇಶ್ ಮಲ್ಯ , ಬಿ . ಮಹೇಶ್ ಬಾಳಿಗಾ , ಬಿ . ರಿತೇಶ್ ಬಾಳಿಗಾ , ಬಿ ವಿಜಯಾನಂದ ಶೆಣೈ . ತಿರುಮಲ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಬಿ . ಪುರುಷೋತ್ತಮ್ ಶೆಣೈ , ಏ . ಗೋವಿಂದ ಪ್ರಭು , ಪಿ . ಪ್ರವೀಣ್ ಕಿಣಿ, ಸೂರ್ಯನಾರಾಯಣ ಬಾಳಿಗಾ ಹಾಗೂ ಸಹಸ್ರಾರು ಭಜಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!