Monday, August 31, 2026
spot_imgspot_img
spot_imgspot_img

ಬಂಟ್ವಾಳ: ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ; ಸಹೋದರರಿಬ್ಬರ ಬಂಧನ..!

- Advertisement -
- Advertisement -

ಬಂಟ್ವಾಳ: ವಾಹನವೊಂದಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಬೆಂಗಳೂರು ಮೂಲದ ವ್ಯಕ್ತಿಯೋರ್ವನಿಗೆ ಮನೆ ಮಂದಿಯ ಎದುರಿನಲ್ಲೇ ಸಹೋದರರಿಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬ್ರಹ್ಮರಕೂಟ್ಲು ಟೋಲ್ ಬಳಿ ನಡೆದಿದೆ.

ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು ಕಣ್ಣೂರು ನಿವಾಸಿಗಳಾದ ಇಸ್ಮಾಯಿಲ್ ಯಾನೆ ಬಾತಿಶ್ ಹಾಗೂ ಯಸೀನ್ ಬಂಧಿತ ಆರೋಪಿಗಳು.

vtv vitla
vtv vitla

ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಎರಡು ಕಾರುಗಳು ಸೈಡ್ ಕೊಡುವ ವಿಚಾರದಲ್ಲಿ ಕಾರೊಂದರ ಸೈಡ್ ಮಿರರ್ ಗೆ ಡಿಕ್ಕಿಯಾಗಿದೆ. ಈ ವಿಷಯದಲ್ಲಿ ಎರಡೂ ಕಾರುಗಳ ಚಾಲರ ನಡುವೆ ಮಾತಿನ ಚಕಮಕಿ ನಡೆದು ಸಹೋದರರಿಬ್ಬರು ಬೆಂಗಳೂರು ಮೂಲದ ನಿವಾಸಿ ಭಾಸ್ಕರ್ ಪೈ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಭಾಸ್ಕರ ಪೈ ಅವರನ್ನು ನೆಲಕ್ಕುರಳಿಸಿ ಕಾಲಿನಿಂದ ಒದೆಯುವ ದೃಶ್ಯ ಹಾಗೂ ಮನೆಮಂದಿ ಬಿಡುವಂತೆ ಗೊಳಾಡುವ ದೃಶ್ಯ ಟೋಲ್ ಗೇಟ್ ನಲ್ಲಿರುವ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾಸ್ಕರ ಪೈ ಅವರು ಉಡುಪಿಗೆ ಕಾರ್ಯಕ್ರಮವೊಂದಕ್ಕೆ ಮನೆ ಮಂದಿಯ ಜೊತೆಯಲ್ಲಿ ತೆರಳಿ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವ ಸಂದರ್ಭ ಘಟನೆ ನಡೆದಿದೆ.

ಭಾಸ್ಕರ್ ಪೈ ಅವರ ದೂರಿನಂತೆ ವೀಡಿಯೋ ಆಧಾರದ ಮೇಲೆ ಪೋಲೀಸರು ಕಣ್ಣೂರು ನಿವಾಸಿಗಳಾದ ಸಹೋದರರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಡಿ.ವೈ.ಎಸ್.ಪಿ. ಪ್ರತಾಪ್ ಥೋರಾಟ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಂತೆ ನಗರ ಠಾಣಾ ಎಸ್.ಐ.ಅವಿನಾಶ್ ಗೌಡ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!