- Advertisement -
- Advertisement -


ಬಂಟ್ವಾಳ: ಹಿಂದೂ ಯುವಕನ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಜ್ಪೆ ಕೈಕಂಬ ನಿವಾಸಿ ಮಹಮ್ಮದ್ ಅಲಿ ಎನ್ನಲಾಗಿದೆ.
ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಆರೋಪಿ ಅನಿಲ್ ಶೆಟ್ಟಿ ಎನ್ನುವ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ಮಹಮ್ಮದ್ ಅಲಿ, ಮಹಿಳೆಗೆ ಆಶ್ಲೀಲ ಚಿತ್ರ ಕಳುಹಿಸುತ್ತಿದ್ದ ಜತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಬಂಟ್ವಾಳ ನಿವಾಸಿಯಾಗಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಮಹಮ್ಮದ್ ವಿರುದ್ದ ನಕಲಿ ಖಾತೆ ತೆರೆದು ಹಲವಾರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪವಿದೆ.


- Advertisement -