Sunday, August 23, 2026
spot_imgspot_img
spot_imgspot_img

ಗುಂಡು ಹಾರಿಸಿ ತಮ್ಮನನ್ನೇ ಕೊಂದ ಅಣ್ಣ..!

- Advertisement -
- Advertisement -

ಒಡಹುಟ್ಟಿದ ಅಣ್ಣನೇ ತಮ್ಮನಿಗೆ ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಪೊನ್ನಂಪೇಟೆ ತಾಲೂಕು ಬೇಗೂರಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ರ್ವತೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಂಡ ಪ್ರಕಾಶ್( 57) ಹಾಗೂ ಗುಂಡು ಹಾರಿಸಿದ ವ್ಯಕ್ತಿ ಸುಬ್ರಮಣಿ ಬೇಗೂರು ಎಂದು ಗುರುತಿಸಲಾಗಿದೆ.

ಸಹೋದರ ಸುಬ್ರಮಣಿ ಬೇಗೂರು ತೋಟದಲ್ಲಿ ಗುಂಡು ಹಾರಿಸಿದ ಪರಿಣಾಮ ಪ್ರಕಾಶ್ ಮೃತಪಟ್ಟಿದ್ದಾರೆ. ಪ್ರಕಾಶ್ ಅವರ ಪುತ್ರನಿಗೂ ಗುಂಡು ತಗಲಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

- Advertisement -

Related news

error: Content is protected !!