Thursday, October 10, 2024
spot_imgspot_img
spot_imgspot_img

ಬಂಟ್ಸ್ ಬಹರೈನ್; ಬಾಕಿಲ್ ದೆಪ್ಪುಲೆ ಎಂಬ ತುಳು ಹಾಸ್ಯ ನಾಟಕದ ಮುಹೂರ್ತ

- Advertisement -
- Advertisement -

ಕರೋನಾ ಕರಾಳ ದಿನಗಳ ನಂತರ ಇದೀಗ ದ್ವೀಪದೇಶ ಬಹರೈನ್ ನಲ್ಲಿ ಕಲಾಲೋಕ ತೆರೆದುಕೊಳ್ಳಲು ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ 19 ವರ್ಷಗಳಿಂದ ಯಶಸ್ವೀ ಸಂಘಟನೆಯಾಗಿ ಸಾಗಿಬಂದಿರುವ ಬಹರೈನ್ ಬಂಟರ ಸಂಘದ ವತಿಯಿಂದ ಪ್ರಸಕ್ತ ಅಧ್ಯಕ್ಷ ಮೋಹನದಾಸ್ ರೈ ಎರುಂಬು ಹಾಗೂ ಆಡಳಿತ ಸಮಿತಿಯ ನೇತೃತ್ವದಲ್ಲಿ ಇದೀಗ ತುಳು ನಾಟಕದ ಮುಹೂರ್ತವು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ . 29ರ ಸಂಜೆ ಬಂಟ ಬಾಂಧವರು ಹಾಗೂ ಕಲಾಭಿಮಾನಿಗಳ ಉಪಸ್ಥಿತಿಯಲ್ಲಿ ನೆರವೇರಿತು.

ಹಲವು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರೊಂದಿಗೆ, ಸ್ಥಳೀಯ ಬಂಟ ಕಲಾವಿದರಿಂದ ಇದೇ ಬರುವ ಡಿಸೆಂಬರ್ ನಲ್ಲಿ ಪ್ರದರ್ಶನಗೊಳ್ಳಲಿದ್ದು, ತುಳುನಾಡ ಖ್ಯಾತ ನಾಟಕಕಾರ ದಿನಕರ ಭಂಡಾರಿ ಕಣಂಜಾರು ರಚನೆಯ ಸಮಾಜಕ್ಕೆ ಉತ್ತಮ ಸಂದೇಶವಿರುವ ಬಾಕಿಲ್ ದೆಪ್ಪುಲೆ ಎಂಬ ತುಳು ಹಾಸ್ಯ ಸಾಮಾಜಿಕ ನಾಟಕಕ್ಕೆ ದಕ್ಷ ನಿರ್ದೇಶಕ,‌ ಸಂಘಟಕ, ಕಲಾವಿದ ಮೋಹನದಾಸ್ ರೈ ಎರುಂಬು ಇವರ ನಿರ್ದೇಶನವಿರುತ್ತದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಹರೈನ್ ಕನ್ನಡ‌ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ , ಬಂಟ್ಸ್ ಬಹರೈನ್ ಮಾಜಿ ಅಧ್ಯಕ್ಷ ಅಮರನಾಥ್ ರೈ, ಭರತ್ ಶೆಟ್ಟಿ, ಪಾಪಿಲ್ಲಾನ್ ರೆಸ್ಟೋರೆಂಟ್ ಮಾಲಕ ಸವಿನ್ ಶೆಟ್ಟಿ, ಶ್ರೀ ಶಿವಕುಮಾರ್ ಶೆಟ್ಟಿ ಹಿರಿಯ ಕನ್ನಡಿಗ ವಿಜಯ ನಾಯ್ಕ್, ನಿತಿನ್ ಶೆಟ್ಟಿ, ಬಹರೈನ್ ಕುಲಾಲ್ಸ್ ಅಧ್ಯಕ್ಷ ಗಣೇಶ್ ಮಾಣಿಲ, ದ್ವೀಪದ ಜನಪ್ರಿಯ ನಾಟಕಕಾರ ಕರುಣಾಕರ ಪದ್ಮಶಾಲಿ, ಹಾಸ್ಯ‌ಕಲಾವಿದ ಪ್ರವೀಣ್ ಶೆಟ್ಟಿ, ಹೊಸ ಪ್ರತಿಭೆ ರಾಜೇಶ್ ಶೆಟ್ಟಿ, ಯಕ್ಷಿತ್ ಶೆಟ್ಟಿ, ರಂಗ ವಿನ್ಯಾಸಕ ದಾಮೋದರ್ ಆಚಾರ್ಯ, ಜಗದೀಶ ಜೆಪ್ಪು, ಮೊದಲಾದವರು ಈ ನಾಟಕ ಪ್ರದರ್ಶನ ಯಶಸ್ವಿಯಾಗಿ ಮೂಡಿಬರಲೆಂದು ಶುಭಹಾರೈಸಿದರು.

ಈ ನಾಟಕದ ಮುಹೂರ್ತವನ್ನು ರಾಮ್ ಪ್ರಸಾದ್ ಅಮ್ಮೆನಡ್ಕ ದೇವತಾ ಪ್ರಾರ್ಥನೆಯೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಕಾಲದಲ್ಲಿ ಅಗಲಿದ ಖ್ಯಾತ ಯುವ ನಟ ಪುನೀತ್ ರಾಜ‌ಕುಮಾರ್ ಗೆ ಮೌನ ಪ್ರಾರ್ಥನೆಯೊಂದಿಗೆ ಚಿರಶಾಂತಿಯನ್ನು ಕೋರಿ ಗೌರವ ಸಲ್ಲಿಸಲಾಯಿತು.

ಮನರಂಜನಾ ಕಾರ್ಯದರ್ಶಿ ದಿವ್ಯರಾಜ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆಗೈದರು. ಅಧ್ಯಕ್ಷ ಮೋಹನದಾಸ್ ರೈಯವರು ಈ ಕಲಾಪ್ರದರ್ಶನದ ಯಶಸ್ಸಿಗಾಗಿ ಕಲಾಭಿಮಾನಿಗಳ ಸಹಕಾರವನ್ನು ಕೋರಿ ಪ್ರಸ್ತಾವನೆಗೈದು ಧನ್ಯವಾದ ಸಮರ್ಪಿಸಿದರು. ಬಳಿಕ ನೆರೆದ ಎಲ್ಲರಿಗೂ ಲಘೂಪಹಾರದ ವ್ಯವಸ್ಥೆ ಮಾಡಲಾಗಿತ್ತು.

- Advertisement -

Related news

error: Content is protected !!