Thursday, February 2, 2023
spot_imgspot_img
spot_imgspot_img

ಬೆಳ್ತಂಗಡಿ: ವಿದ್ಯಾರ್ಥಿಗಳ ಕಿಸ್ಸಿಂಗ್‌ ಪ್ರಕರಣ; ಒತ್ತಡ ಹೆಚ್ಚುತ್ತಿದಂತೆ ಮುಸ್ಲಿಂ ವಿದ್ಯಾರ್ಥಿ ಸಸ್ಪೆಂಡ್‌

- Advertisement -G L Acharya G L Acharya
vtv vitla
- Advertisement -

ಬೆಳ್ತಂಗಡಿ: ಕರಾವಳಿಯಲ್ಲಿ ಪದೇ ಪದೇ ಲವ್‌ ಜಿಹಾದ್‌ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಬೆಳ್ತಂಗಡಿಯ ಖಾಸಗಿ ಕಾಲೇಜೊಂದರಲ್ಲಿ ಇಂತಹದೊಂದು ಘಟನೆ ನಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜ್‌ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಸಸ್ಪೆಂಡ್‌ ಮಾಡಿದೆ.

ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದ ವೇಳೆ ಕಾಲೇಜು ಅವರಣದಲ್ಲಿ ಮುಸ್ಲಿಂ ವಿದ್ಯಾರ್ಥಿ ಹಾಗೂ ಹಿಂದೂ ವಿದ್ಯಾರ್ಥಿನಿ ಹಗ್ ಮಾಡಿ ಕಿಸ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಪ್ರತಿಷ್ಠಿತ ಕಾಲೇಜಿನಲ್ಲಿ ಇಂತಹ ಪ್ರಕರಣ ನಡೆದಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿ ಹಿಂದೂ ಯುವತಿಗೆ ರಾಜಾರೋಷವಾಗಿ ರಸ್ತೆಯಲ್ಲಿ ಹಗ್, ಕಿಸ್ ಮಾಡಿದ್ದು ನಂತರ ಈ ಪ್ರಕರಣ ಕಾಲೇಜಿನ ಆಡಳಿತ ಮಂಡಳಿಗೂ ಹೋಗಿದ್ದು, ಕೊನೆಗೆ ಹುಡುಗಿಯ ಪೋಷಕರನ್ನು ಕರೆತರಲಾಗಿದ್ದು, ಆಕೆ ಹೊರ ಊರಿನವಳಾಗಿದ್ದರಿಂದ ಆಕೆಯನ್ನು ಆಕೆಯ ಪೋಷಕರು ಕರೆದುಕೊಂಡು ಹೋಗಿದ್ದು, ನಂತರ ಆಕೆಯನ್ನು ಕಾಲೇಜಿನಿಂದ ಸಸ್ಪೆಂಡ್ ಕೂಡಾ ಮಾಡಲಾಗಿತ್ತು. ಆದರೆ ಈ ಕೃತ್ಯ ಎಸಗಿದ ಅಶ್ವಿರ್ ಎನ್ನುವ ವಿದ್ಯಾರ್ಥಿಯನ್ನು ಮಾತ್ರ ನಿನ್ನೆ ಸಂಜೆಯವರೆಗೆ ಡಿಬಾರ್ ಮಾಡಿರಲಿಲ್ಲ. ಯುವತಿಯನ್ನು ಡಿಬಾರ್ ಮಾಡಿದ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಏಕೆ ಡಿಬಾರ್ ಮಾಡಿಲ್ಲ ಎಂದು ಮಾಧ್ಯಮದಲ್ಲಿ ಬಂದ ಬಳಿಕ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತು ಈ ವಿದ್ಯಾರ್ಥಿಯನ್ನು ನಂತರ ಕಾಲೇಜಿನಿಂದ ಸಸ್ಪೆಂಡ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.

ಸದ್ಯ ಕಾಲೇಜು ಆಡಳಿತ ಮಂಡಳಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಚರ್ಚೆ ಮಾಡುತ್ತಿರುವವರ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದೆ. ಇಬ್ಬರನ್ನೂ ಸಸ್ಪೆಂಡ್ ಮಾಡಿದ್ದಾಗಿ ಆಡಳಿತ ಮಂಡಳಿ ದೂರಿನಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.

ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸುದ್ದಿ ಹರಿದಾಡಿದ ಬೆನ್ನಲ್ಲೇ ಕಾಲೇಜ್‌ ಆಡಳಿತ ಮಂಡಳಿ ಏಚ್ಚೆತ್ತುಕೊಂಡು ವಿದ್ಯಾರ್ಥಿನಿಯನ್ನು ಡಿಬಾರ್‌ ಮಾಡಿದಂತೆ ವಿದ್ಯಾರ್ಥಿಯನ್ನು ಸಸ್ಪೆಂಡ್‌ ಮಾಡಲಾಗಿದೆ

- Advertisement -

Related news

error: Content is protected !!