Friday, May 20, 2022
spot_imgspot_img
spot_imgspot_img

ಬ್ಯಾಂಕಿಂಗ್​​ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಕನ್ನಡದಲ್ಲೂ ‘ಐಬಿಪಿಎಸ್’ ಪರೀಕ್ಷೆ ಬರೆಯಲು ಅವಕಾಶ..!

- Advertisement -
- Advertisement -

ಬೆಂಗಳೂರು: ರಾಜ್ಯದ ಬ್ಯಾಂಕಿಂಗ್​​ ಕ್ಷೇತ್ರದಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ಮುಂದೆ ಕನ್ನಡದಲ್ಲಿಯೇ ಪರೀಕ್ಷೆಯ ಬರೆಯಬಹುದಾಗಿದೆ.

ಐಬಿಪಿಎಸ್​ ನಡೆಸುವ ಪ್ರಾದೇಶಿಕ, ಬ್ಯಾಂಕಿಂಗ್ ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡೂ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಗುಡ್​​ನ್ಯೂಸ್ ನೀಡಿದ್ದು, ಇನ್ನುಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಸುವ ಪರೀಕ್ಷೆಯನ್ನ ಕನ್ನಡದಲ್ಲೂ ಬರೆಯಲು ಅವಕಾಶ ಮಾಡಿಕೊಟ್ಟಿದೆ.

ಬ್ಯಾಂಕಿಂಗ್ ಉದ್ಯೋಗ ನೇಮಕಾತಿಗೆ ನಡೆಸುವ ಐಬಿಪಿಸ್ ಪರೀಕ್ಷೆಯನ್ನು ಕನ್ನಡ ಮತ್ತು ಕೊಂಕಣಿಯಲ್ಲಿ ಬರೆಯಲು ಅವಕಾಶ ನೀಡಿದೆ.

ಐಬಿಪಿಎಸ್​ನ ಈ ನಿರ್ಧಾರದಿಂದ ಕರ್ನಾಟಕದ ಸಾವಿರಾರು ಯುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಯುವಕ, ಯುವತಿಯರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗಲಿದೆ.

- Advertisement -

Related news

error: Content is protected !!