




ಟ್ರಿಪ್ ಹೋದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ 17 ಮಂದಿ ಮೃತಪಟ್ಟ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಭಾರತೀಯರು ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದರು. ಈ ಪೈಕಿ ವಿದ್ಯಾರ್ಥಿ ಸಹಿತ ಹದಿನೇಳು ಮಂದಿಗೆ 11 ಕೋಟಿ ರೂಪಾಯಿ ಪರಿಹಾರ ಸಿಕ್ಕಿದ ಘಟನೆ ದುಬೈನಲ್ಲಿ ನಡೆದಿದೆ.
ಇಂಜಿನಿಯರ್ ವಿದ್ಯಾರ್ಥಿ ಮೊಹ್ಮದ್ ಬೇಗ್ ಮಿರ್ಜಾ (20) ಬರೋಬ್ಬರಿ 11 ಕೋಟಿ ರೂಪಾಯಿ ಪರಿಹಾರ ಪಡೆದವರು.
ಒಮೆನ್‌ನಿಂದ UAEಗೆ ಪ್ರಯಾಣಿಸುತ್ತಿದ್ದಾಗ ಬಸ್ ಅಪಘಾತ ಸಂಭವಿಸಿತ್ತು. ಬಸ್ಸಿನಲ್ಲಿ ಒಟ್ಟು 31 ಪ್ರಯಾಣಿಕರಿದ್ದು, ಮಿರ್ಜಾ ಅವರು ರಜೆ ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆಗೆ ಟ್ರಿಪ್‌ಗೆ ಹೋದಾಗ ಅಪಘಾತವುಂಟಾಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಿರ್ಜಾ ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮಿರ್ಜಾ ಬರೋಬ್ಬರಿ 14 ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಎರಡು ತಿಂಗಳುಗಳ ಬಳಿಕ ಮಿರ್ಜಾ ಚೇತರಿಸಿಕೊಂಡಿದ್ದರು.ಭಾರತೀಯರು ಸೇರಿ ಒಟ್ಟು 17 ಮಂದಿಗೆ 5 million ಅಂದರೆ 11 ಕೋಟಿಗೂ ಹೆಚ್ಚು ಪರಿಹಾರ ಹಣ ಸಿಕ್ಕಿದೆ.
ಬಸ್ ಡ್ರೈವರ್ ಒಮೆನ್ ಮೂಲದವನಾಗಿದ್ದು, ಈ ಪ್ರಕರಣದಲ್ಲಿ ತಪ್ಪಿತಸ್ಥ ಡ್ರೈವರ್‌ಗೆ 7 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.