Sunday, June 29, 2025
spot_imgspot_img
spot_imgspot_img

ಮಂಗಳೂರು: “ಕಿಡ್ ಮಾಡೆಲ್ 2022” ಅಪೂರ್ವ ವಿನ್ನರ್ – ನತಾಶ ರನ್ನರ್

- Advertisement -
- Advertisement -

ಮಂಗಳೂರು: ಪ್ರೀವಂತ ಕ್ರಿಯೇಟಿವ್ ಸೆಂಟರ್ ಮಂಗಳೂರು ಆಯೋಜನೆಯ ಕಿಡ್ ಮಾಡೆಲ್ ಅವಾರ್ಡ್ 2022 ರ ವಿನ್ನರ್ ಆಗಿ ಕಿಡ್ ಮಾಡೆಲ್ ಪಟ್ಟವನ್ನು ಅಪೂರ್ವ ಪಡೆದಿದ್ದಾಳೆ.

ರೇಡಿಯೋ ಸಾರಂಗ್ ಮಂಗಳೂರಲ್ಲಿ 20 -10 -2022 ರಂದು ನಡೆದ ಕಾರ್ಯಮದಲ್ಲಿ ಕಿಡ್ ಮಾಡೆಲ್ ಅವಾರ್ಡ್ ನ್ನು ಅಪೂರ್ವಳಿಗೆ ನೀಡಲಾಯಿತು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮಾಳ ಗ್ರಾಮದ ಅಶೋಕ್ ಮತ್ತು ಹರಿಣಾಕ್ಷಿ ದಂಪತಿಯ ಪುತ್ರಿಯಾಗಿರುವ ಅಪೂರ್ವ ಇದೀಗ ಕಿಡ್ ಮಾಡೆಲ್ ಪಟ್ಟ ಪಡೆದಿದ್ದಾಳೆ.

ಪ್ರತೀ 2 ವರ್ಷಕ್ಕೊಮ್ಮೆ ಆಯೋಜನೆಯಾಗುವ ಕಿಡ್ ಮಾಡೆಲ್ ಅವಾರ್ಡ್, 2016 ರಿಂದ ಆರಂಭವಾಗಿತ್ತು. ಇದುವರೆಗೆ ಮೂವರು ಪುಟಾಣಿಗಳು ಕಿಡ್ ಮಾಡೆಲ್ ಪಟ್ಟವನ್ನು ಅಲಂಕರಿಸಿದ್ದರು. 2016 ರಲ್ಲಿ ಸ್ಪೂರ್ತಿ, 2018 ರಲ್ಲಿ ಶ್ರದ್ದಾ ಹಾಗೆ 2020 ರಲ್ಲಿ ಸನ್ಮಿತಾ, ಕಿಡ್ ಮಾಡೆಲ್ ಆಗಿದ್ರು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದ ನಿವೇದಿತಾರವರು ಕಿಡ್ ಮಾಡೆಲ್ ಅವಾರ್ಡ್ ನ್ನು ಹಾಗೆ ಉಳಿದ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರಾದ ಅಶೋಕ್, ಹರಿಣಾಕ್ಷಿ, ನಟರಾಜ್, ಆಶಾ ಹಾಗೆ ಸಬಿತಾ ಹಾಗೆ ರೇಡಿಯೋ ಸಾರಂಗ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೀವಂತದ ನಿರ್ದೇಶಕರಾದ ಕುಮಾರೇಶ್ ನೆರವೇರಿಸಿದರು.

- Advertisement -

Related news

error: Content is protected !!