Friday, June 26, 2026
spot_imgspot_img
spot_imgspot_img

ಮಂಗಳೂರು: ಕುಡಿದ ಅಮಲಿನಲ್ಲಿ ರಂಗೋಲಿಯನ್ನು ವಿರೂಪಗೊಳಿಸಿ ದುರ್ವರ್ತನೆ ತೋರಿದ ವಿದ್ಯಾರ್ಥಿಗಳು

- Advertisement -
- Advertisement -

ಮಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ದೀಪಾವಳಿ ಹಬ್ಬಕ್ಕೆ ಬಿಡಿಸಿದ ರಂಗೋಲಿಯನ್ನು ಕುಡಿದ ಅಮಲಿನಲ್ಲಿದ್ದ ವಿದ್ಯಾರ್ಥಿಗಳು ವಿರೂಪಗೊಳಿಸಿದ ಘಟನೆ ನಗರದ ಬಿಜೈನಲ್ಲಿ ನಡೆದಿದೆ.

ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿ ಅಪಾರ್ಟ್‌ಮೆಂಟ್ ನಿವಾಸಿಗಳು ರಂಗೋಲಿ ಹಾಕಿದ್ದರು. ಆದರೆ ಕೇರಳ ಮೂಲದವರೆನ್ನಲಾದ ಕೆಲವು ವಿದ್ಯಾರ್ಥಿಗಳು ಈ ರಂಗೋಲಿಯನ್ನು ಮೆಟ್ಟಿ ಅದನ್ನು ವಿರೂಪಗೊಳಿಸಿ ದುರ್ವರ್ತನೆ ತೋರಿದ್ದಾರೆ.

ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಒಬ್ಬ ವಿದ್ಯಾರ್ಥಿ ರಂಗೋಲಿ ಬಳಿ ನಿಂತಿದ್ದು, ಇನ್ನೊಬ್ಬ ರಂಗೋಲಿಯನ್ನು ಮೆಟ್ಟುತ್ತಿದ್ದಾನೆ. ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಘಟನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೊಲೀಸರು ಇಂತಹ ವರ್ತನೆ ತೋರಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!