Tuesday, May 30, 2023
spot_imgspot_img
spot_imgspot_img

ಮಂಗಳೂರು: ನಿಯಮ ಮೀರಿ ಪ್ರಖರ ಬೆಳಕು ಅಳವಡಿಸಿರುವ ವಾಹನಗಳ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ

- Advertisement -G L Acharya
- Advertisement -

ಮಂಗಳೂರು: ಸಂಚಾರಿ ನಿಯಮಗಳನ್ನು ಮೀರಿ ಪ್ರಖರ ಬೆಳಕು ಅಳವಡಿಸಿರುವ ವಾಹನಗಳ ವಿರುದ್ಧ ಮಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಸುಮಾರು 25 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಜರಗಿಸಿದ್ದಾರೆ.

ವಾಹನಗಳಲ್ಲಿ ಅತ್ಯಾಕರ್ಷಣೆಯ ಉದ್ದೇಶದಿಂದ ಅನಗತ್ಯವಾಗಿ ಅಳವಡಿಸುವ ಇಂತಹ ಬೆಳಕುಗಳಿಂದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ. ಹೀಗಾಗಿ ಪ್ರಖರ ಬೆಳಕಿನ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಈ ಬಗ್ಗೆ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.

- Advertisement -

Related news

error: Content is protected !!