Tuesday, December 3, 2024
spot_imgspot_img
spot_imgspot_img

ಮಂಗಳೂರು: ಪೋಕ್ಸೋ ಆರೋಪಿಗೆ 15 ವರ್ಷಗಳ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರಗೈದು, ಬಳಿಕ ದುಷ್ಕೃತ್ಯದ ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಆರೋಪಿಗೆ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-2 ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಅ. 3ರಂದು ಆರೋಪಿಗೆ 15 ವರ್ಷಗಳ ಜೈಲು ಮತ್ತು 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ, 2ನೇ ಆರೋಪಿ ನಾರಾಯಣನನ್ನು ಖುಲಾಸೆಗೊಳಿಸಿದ್ದಾರೆ.

2019ರಲ್ಲಿ ಬಾಲಕಿ ನೀಡಿದ್ದ ದೂರಿನಂತೆ ಬಜ್ಪೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿ ತೋಡಾರ್‌ ಗ್ರಾಮದ ಸೀತಾರಾಮ (26)ನನ್ನು ಬಂಧಿಸಿದ್ದರು. ಆರೋಪಿ ತನ್ನ ಸಂಬಂಧಿ ಕೊಂಡೆಮೂಲ ಗ್ರಾಮದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದಿದ್ದ. ಈ ಪ್ರಕರಣದಲ್ಲಿ ಸೀತಾರಾಮ ಪ್ರಥಮ ಆರೋಪಿಯಾಗಿದ್ದರೆ, ಮದುವೆ ಮಾಡಿಕೊಡುವುದಾಗಿ ಹೇಳಿ ಮಧ್ಯ ಪ್ರವೇಶಿಸಿದ್ದ ನಾರಾಯಣ 2ನೇ ಆರೋಪಿಯಾಗಿದ್ದ. ಬಜಪೆ ಪೊಲೀಸ್‌ ಠಾಣೆಯ ನಿರೀಕ್ಷಕ ಕೆ.ಆರ್‌. ನಾಯಕ್‌ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

astr
- Advertisement -

Related news

error: Content is protected !!