Friday, July 4, 2025
spot_imgspot_img
spot_imgspot_img

ಮಂಗಳೂರು: ಮೈದಾ ಹಿಟ್ಟು ಖರೀದಿ ನೆಪದಲ್ಲಿ ಲಕ್ಷಾಂತರ ರೂ. ವಂಚನೆ

- Advertisement -
- Advertisement -
vtv vitla
vtv vitla

ಮಂಗಳೂರು: ಮೈದಾ ಹಿಟ್ಟು ಖರೀದಿ ಮಾಡಲು ಇದೆ ಎಂದು ನಂಬಿಸಿ ಆರ್ಮಿಯಲ್ಲಿ ದುಡಿಯುತ್ತಿದ್ದ ಅಮನ್ ಎಂದು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬ, ಬ್ಯಾಂಕ್ ಖಾತೆಯಿಂದ 2,94,830 ರೂ. ಹಣ ವರ್ಗಾಯಿಸಿ ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla

ನಗರದ ಮಹಿಳೆಯೊಬ್ಬರು ಯೂನಿಯನ್ ಬ್ಯಾಂಕ್ ಪದವು ಬ್ರಾಂಚಿನಲ್ಲಿ ಖಾತೆಯನ್ನು ಹೊಂದಿದ್ದು, ಇವರ ಪತಿ ಪ್ಲೋರ್‍ ಮಿಲ್ ಒಂದರ ಉದ್ಯೋಗಿಯಾಗಿದ್ದಾರೆ. ಆರ್ಮಿಯಲ್ಲಿ ದುಡಿಯುತ್ತಿದ್ದ ಅಮನ್ ಎಂದು ಪರಿಚಯಿಸಿಕೊಂಡು ವ್ಯಕ್ತಿ ಕರೆ ಮಾಡಿ ಮೈದಾ ಖರೀದಿಸುವುದಾಗಿ ತಿಳಿಸಿದ್ದಾರೆ.ಅದರ ಹನ ಪಾವತಿಸಲು ಕ್ಯೂಆರ್ ಕೋಡ್ ಕಳುಹಿಸುವಂತೆ ತಿಳಿಸಿರುತ್ತಾರೆ. ತನ್ನ ಪತಿ ಹಾಗೂ ಕಂಪನಿಯ ಮೊಬೈಲ್ ನಲ್ಲಿ ಯಾವುದೇ ಕ್ಯೂ ಆರ್‍ ಕೋಡ್ ಇಲ್ಲದ ಕಾರಣ ಮಹಿಳೆ ತನ್ನ ಮೊಬೈಲ್ ನಂಬರ್ ನೀಡಿದ್ದಾರೆ. ಆ ಬಳಿಕ ಅಪರಿಚಿತ ವ್ಯಕ್ತಿಯು ಆ ಮೊಬೈಲ್‌ಗೆ ಸಂಪರ್ಕಿಸಿ ಕ್ಯೂಆರ್ ಕೋಡ್ ಕೇಳಿ ಹಂತಹಂತವಾಗಿ 2,94,830ರೂ. ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರು ನೀಡಲಾಗಿದೆ.

ಸೈಬರ್ ಕ್ರೈಮ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

vtv vitla
vtv vitla
- Advertisement -

Related news

error: Content is protected !!