- Advertisement -




- Advertisement -
ಮಂಗಳೂರು: 14ನೇ ಮಹಡಿಯಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಮಂಗಳೂರಿನ ನಂತೂರುನಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ನಂತೂರಿನ ಎಸ್ ಕೆಎಸ್ ಪ್ಲಾನೆಟ್ ನಿವಾಸಿ ಮೊಬೈಲ್ ಕೇರ್ ಸಲೀಂ ಹಾಗೂ ಬುಶುರಾ ದಂಪತಿ ಪುತ್ರ ಮುಹಮ್ಮದ್ ಶಾಮಲ್ (22) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಶಮಾಲ್, ರಜೆಯ ಹಿನ್ನೆಲೆಯಲ್ಲಿ ವಾರದ ಹಿಂದೆ ಮನೆಗೆ ಬಂದಿದ್ದ. ಗುರುವಾರ ಬೆಳಗ್ಗಿನ ಜಾವ ರಂಝಾನ್ ಉಪವಾಸದ ಸಹರಿಗಾಗಿ ಎದ್ದ ಸಮಯದಲ್ಲಿ 14ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಎ.ಜೆ.ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
- Advertisement -