Wednesday, September 23, 2026
spot_imgspot_img
spot_imgspot_img

ಸ್ವಾತಂತ್ರ್ಯೋತ್ಸವ ಅಂಗವಾಗಿ ಆ.7ರಂದು ಪುತ್ತೂರಿನಲ್ಲಿ ಬೃಹತ್ ತಿರಂಗ ಯಾತ್ರೆ

- Advertisement -
- Advertisement -

ಸಾರ್ವಜನಿಕರು, ವಿದ್ಯಾಥಿಗಳು, ಮಾಜಿ ಸೈನಿಕರು, ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಬೇಕು

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾಹಿತಿ

ಪುತ್ತೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 7 ರಂದು ಗುರುವಾರ ಸಂಜೆ 3:00 ಗಂಟೆಗೆ ಪುತ್ತೂರಿನಲ್ಲಿ ಬೃಹತ್ ‘ತಿರಂಗ ಯಾತ್ರೆ’ ನಡೆಯಲಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಿಂದ ಯಾತ್ರೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಹೊರಟು ಕಿಲ್ಲೆ ಮೈದಾನದವರೆಗೆ ಸಾಗಿ ಬಳಿಕ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಸೋಮವಾರ(ಆ.3) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 7ರ ಶುಕ್ರವಾರ ಸಂಜೆ 3 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ‘ತಿರಂಗಾ ಯಾತ್ರೆ’ ಹೊರಡಲಿದೆ. ರಾಷ್ಟ್ರಧ್ವಜ ಹಿಡಿದು ಸಾಗುವ ಬೃಹತ್ ಯಾತ್ರೆಯು ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲಾ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ,” ಎಂದು ತಿಳಿಸಿದರು.

ಆಗಸ್ಟ್ 10ರಿಂದ 15ರವರೆಗೆ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ಮೊದಲ ಕಾರ್ಯಕ್ರಮ ಪುತ್ತೂರಿನಲ್ಲಿ ಮೂಡಿಬರಲಿದೆ. ಮಂಗಳೂರು ದಕ್ಷಿಣದಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ. ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಶಕ್ತಿ ತುಂಬಿದ ಊರು ಪುತ್ತೂರು. ಅಟಲ್ ವಿರಾಸತ್‌ನಂತೆ ರಾಜ್ಯಕ್ಕೆ ಸಂದೇಶ ಕೊಡುವ ಕಾರ್ಯಕ್ರಮ ಇಲ್ಲಾಗಲಿದೆ, ಎಂದರು.

ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಈಗಾಗಲೇ ಎಷ್ಟೋ ಮಂದಿ ಸರಳ ಆ್ಯಪ್‌ನಲ್ಲಿ ಸೆಲ್ಪಿ ತೆಗೆದು ಅಪ್‌ಲೋಡ್ ಮಾಡಿದ್ದಾರೆ. ಈ ಬಾರಿಯ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಮೂರು ದಿನ ರಾಷ್ಟ್ರಧ್ವಜ ಹಾರಿಸಿ, ಅದರ ಜೊತೆಗೆ ಸೆಲ್ಪಿ ತೆಗೆದು ಕಳುಹಿಸಲು ಕರೆ ನೀಡಲಾಗಿದೆ. ಇದು ಗಡಿಯಲ್ಲಿ ರಾಷ್ಟ್ರಧ್ವಜವನ್ನು ನೆಟ್ಟು ಪ್ರಾಣ ಬಿಡುವ ಸೈನಿಕರಿಗೆ ಹಾಗೂ ಅನ್ನದಾತನಾದ ರೈತನಿಗೆ ಗೌರವ ನೀಡುವ ಕಾರ್ಯಕ್ರಮ,” ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನದ ಬೆಂಬಲ ಇದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಆಗಮಿಸಿ ದೇಶದ್ರೋಹಿ ಹೇಳಿಕೆಗಳನ್ನು ನೀಡಿದರು. ಪ್ರತಿಭಟನಾಕಾರರು ಮೋದಿ ವಿರುದ್ಧ ಕೆಟ್ಟ ಶಬ್ದಗಳಿಂದ ಮಾತನಾಡಿದರು. ನಾವು ಪೂಜಿಸುವ ಸೀತಾ ಮಾತೆ, ಪ್ರಭು ರಾಮಚಂದ್ರನ ವಿರುದ್ಧ ಕೆಟ್ಟ ಪದ ಬಳಸಿದರು. ಹಾಗಾಗಿ ಈ ದೇಶವಿರೋಧಿ ಮನಸ್ಥಿತಿಯ ವಿರುದ್ಧ ಧ್ವನಿ ಮೊಳಗಿಸುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಿರಂಗಾ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಎಂದು ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, “ಬಿಜೆಪಿಯಲ್ಲಿ ಎರಡು ಪಕ್ಷಗಳಿಲ್ಲ, ಇರುವುದು ಬಿಜೆಪಿ ಒಂದೇ ಪಕ್ಷ. ಇಲ್ಲಿ ನಾವೆಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಹಾಗೆಂದು ಈ ‘ತಿರಂಗಾ ಯಾತ್ರೆ’ ಬಿಜೆಪಿ ಬ್ಯಾನ‌ರ್ ಅಡಿಯಲ್ಲಿ ನಡೆಯುತ್ತಿಲ್ಲ; ಇದು ರಾಷ್ಟ್ರಧ್ವಜದ ಅಡಿಯಲ್ಲಿ ನಡೆಯುತ್ತಿದೆ. ಹಾಗಾಗಿ ಮಾಜಿ ಸೈನಿಕರು, ಸಾರ್ವಜನಿಕರು ಹಾಗೂ ಎಲ್ಲರೂ ಇದರಲ್ಲಿ ಭಾಗವಹಿಸಬೇಕು,” ಎಂದು ಆಹ್ವಾನ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!