Sunday, June 28, 2026
spot_imgspot_img
spot_imgspot_img

ಮಂಜೇಶ್ವರ: ತಲಪಾಡಿ ಆರ್.ಟಿ.ಒ ಚೆಕ್ ಪೋಸ್ಟ್ ಗೆ ವಿಜಿಲೆನ್ಸ್ ತಂಡದಿಂದ ಮಿಂಚಿನ ದಾಳಿ; ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಅಧಿಕಾರಿ

- Advertisement -
- Advertisement -

ಮಂಜೇಶ್ವರ: ತಲಪಾಡಿ ಗಡಿಯಲ್ಲಿರುವ ಆರ್.ಟಿ.ಒ. ಚೆಕ್ ಪೋಸ್ಟ್ ಗೆ ವಿಜಿಲೆನ್ಸ್ ತಂಡ ಮಿಂಚಿನ ದಾಳಿ ನಡೆಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಲಂಚ ಸ್ವೀಕಾರ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಇನ್ನು ವಿಜಿಲೆನ್ಸ್ ತಂಡ ಸುಮಾರು 16,900 ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಲಂಚ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಂತೆ ವಿಜಿಲೆನ್ಸ್ ತಂಡ ದಾಳಿ ನಡೆಸಿದೆ.

ಕಲೆಕ್ಷನ್ ಏಜೆಂಟ್ ಮೂಲಕ ವಾಹನ ಚಾಲಕರಿಂದ ಲಂಚ ಪಡೆಯುತ್ತಿದ್ದರು ಎಂದು ವಿಜಲೆನ್ಸ್ ತನಿಖೆಯಿಂದ ತಿಳಿದು ಬಂದಿದೆ. ವಿಜಿಲೆನ್ಸ್ ಇನ್ಸ್ ಪೆಕ್ಟರ್ ಕೆ. ರಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

driving
- Advertisement -

Related news

error: Content is protected !!